ಪಾದಯಾತ್ರೆಯ ವೇಳೆ ಚರ್ಚೆಗೀಡಾದ ಡಿ.ಕೆ.ಸುರೇಶ್ ವರ್ತನೆ - Mahanayaka
9:08 PM Thursday 19 - September 2024

ಪಾದಯಾತ್ರೆಯ ವೇಳೆ ಚರ್ಚೆಗೀಡಾದ ಡಿ.ಕೆ.ಸುರೇಶ್ ವರ್ತನೆ

dk suresh
12/01/2022

ಬೆಂಗಳೂರು:  ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಡಿ.ಕೆ.ಬ್ರದರ್ಸ್ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. ಪಾದಯಾತ್ರೆ ಯಶಸ್ವಿಯಾಗಿದ್ದರೂ ಕೂಡ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್  ವರ್ತನೆ ಇದೀಗ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ.

ಪಾದಯಾತ್ರೆಯಲ್ಲಿ ಕಾಂಗ್ರೆಸ್ ಯುವ ನೇತಾರರು ಅವಿರತವಾಗಿ ಶ್ರಮಿಸಿದ್ದಾರೆ.  ಹೀಗಾಗಿಯೇ ಪಾದಯಾತ್ರೆ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಆದರೆ, ಡಿ.ಕೆ.ಬ್ರದರ್ಸ್ ಈ ಪಾದಯಾತ್ರೆಯ ಸಂಪೂರ್ಣ ಯಶಸ್ಸು ತಮ್ಮದು ಎನ್ನುವುದನ್ನು ಬಿಂಬಿಸಲು ಯತ್ನಿಸುತ್ತಿದ್ದಾರೆ. ಪಾದಯಾತ್ರೆಯ ಮೂಲಕ ಡಿ.ಕೆ.ಶಿವಕುಮಾರ್ ತಾನು ಮುಂದಿನ ಮುಖ್ಯಮಂತ್ರಿಯಾಗಲು ಅರ್ಹ ವ್ಯಕ್ತಿ ಎನ್ನುವುದನ್ನು ಬಿಂಬಿಸಲು ಯತ್ನಿಸಿದರೆ, ಡಿ.ಕೆ.ಸುರೇಶ್ ಇಲ್ಲಿ ನಾವೇ ನಾಯಕರು, ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಇದೀಗ ಕಾಂಗ್ರೆಸ್ ನ ಯುವ ಕಾರ್ಯಕರ್ತರ ನಡುವೆ ಚರ್ಚೆಗೀಡಾಗಿದೆ.

ಒಂದೆಡೆ ಮಹಮ್ಮದ್ ಹ್ಯಾರಿಸ್ ನಲಪಾಡ್ ರಂತಹ ಯುವ ಕಾಂಗ್ರೆಸ್ ಲೀಡರ್ ಗಳು ಪಾದಯಾತ್ರೆ ಯಶಸ್ಸಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಆದರೆ, ಡಿ.ಕೆ.ಸುರೇಶ್ ಅವರು ಪಾದಯಾತ್ರೆ ವೇಳೆಯಲ್ಲಿ ಹ್ಯಾರಿಸ್ ನಲಪಾಡ್ ರಂತಹ ಯುವ ನಾಯಕರ ಕೊರಳಪಟ್ಟಿ ಹಿಡಿದೆಳೆದು ರೌಡಿಯಂತೆ ವರ್ತಿಸಿರುವುದು ಸಾರ್ವಜನಿಕವಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.


Provided by

ಪಾದಯಾತ್ರೆಯಲ್ಲಿ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳುವ ಮತ್ತು ಆತ್ಮೀಯತೆಯಿಂದ ಕಾಣುವ ಸಿದ್ದರಾಮಯ್ಯನವರ ಅನುಪಸ್ಥಿತಿಯಲ್ಲಿ ಇಂತಹದ್ದೆಲ್ಲ ಘಟನೆಗಳಿಗೆ ಸಾಕ್ಷಿಯಾಗಿದೆ. ಡಿ.ಕೆ.ಶಿವಕುಮಾರ್ ಅವರು ವಾಲಾಡುತ್ತಿರುವ ವಿಡಿಯೋ ಕೂಡ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

ಇನ್ನೂ  ಡಿ.ಕೆ.ಸುರೇಶ್ ತನ್ನ ಕೊರಳಪಟ್ಟಿ ಹಿಡಿದು ಎಳೆದು ತಳ್ಳಿದ ಘಟನೆಗೆ ಸಂಬಂಧಿಸಿದಂತೆ ಫೇಸ್ ಬುಕ್ ಲೈವ್ ಗೆ ಬಂದ ನಲಪಾಡ್,  ನಾನು ಯಾರು ಎಂದು ತಿಳಿಯದೇ ಅವರು ಈ ರೀತಿ ಮಾಡಿದರು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಡಿ.ಕೆ.ಸುರೇಶ್ , ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ನೋಡಿದ ಬಳಿಕವೂ ಗದರುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ರೀತಿಯ ಅಹಂಕಾರಿ ವರ್ತನೆ ಡಿ.ಕೆ.ಬ್ರದರ್ಸ್ ಬಗ್ಗೆ ಕೆಟ್ಟ ಸಂದೇಶವನ್ನು ನೀಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

1ರಿಂದ 9ನೇ ತರಗತಿ ಮಕ್ಕಳಿಗೆ ನಾಳೆಯಿಂದ ಚಂದನ ಟಿವಿಯಲ್ಲಿ ಪಾಠ!

77ರ ವೃದ್ಧ ಸೇರಿದಂತೆ 8 ಮಂದಿಯಿಂದ ಬಾಲಕಿಯ ಮೇಲೆ ಅತ್ಯಾಚಾರ

ಶಿವರಾಜ್ ಕುಮಾರ್ ಪಾದಯಾತ್ರೆಗೆ ಹೋಗದಿರುವುದು ನನಗೆ ತುಂಬಾ ಸಂತೋಷವಾಗಿದೆ | ಸಚಿವ ಈಶ್ವರಪ್ಪ

ಗಾಯಕಿ ಲತಾ ಮಂಗೇಶ್ಕರ್  ಅನಾರೋಗ್ಯ:  ಐಸಿಯುನಲ್ಲಿ ಚಿಕಿತ್ಸೆ

ಟೆಲಿಗ್ರಾಮ್  ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ

ಇತ್ತೀಚಿನ ಸುದ್ದಿ