ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂಬೈ ಸಿಟಿ ಸಿವಿಲ್ ಕೋರ್ಟ್ ವಜಾಗೊಳಿಸಿದೆ.
ಮುಂಬೈನ್ ಪನ್ವೇಲ್ ಪ್ರದೇಶದಲ್ಲಿ ಸಲ್ಮಾನ್ ಖಾನ್ ಫಾರ್ಮ್ ಹೌಸ್ ಪಕ್ಕದ ಸ್ಥಳದಲ್ಲಿ ಖೇತನ್ ಕಕ್ಕಡ್ ಎಂಬ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ. ಆದರೆ, ಖೇತನ್ ಕಕ್ಕಡ್ ಯುಟ್ಯೂಬ್ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಬಗ್ಗೆ ಹಾಗೂ ಫಾರ್ಮ್ ಹೌಸ್ ಕುರಿತು ನೀಡಿರುವ ವಿವಾದಾಸ್ಪದ ಹೇಳಿಕೆಗಳು ತಮ್ಮ ಮಾನ ಹಾನಿಯಾಗುವ ರೀತಿಯಲ್ಲಿವೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಮುಂಬೈ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಾನ ಹಾನಿ ಮೊಕದ್ದಮೆ ಹೂಡಿದ್ದರು.
ಭವಿಷ್ಯದಲ್ಲಿ ತಮ್ಮ ವಿರುದ್ಧ ಅಂತಹ ಹೇಳಿಕೆ ನೀಡದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು, ಸಂದರ್ಶನದ ಆ ಭಾಗವನ್ನು ತೊಲಗಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಆದರೆ, ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳದೆ ನ್ಯಾಯಾಲಯ ವಜಾಗೊಳಿಸಿದೆ. ಖೇತನ್ ಕಕ್ಕಡ್ ವಿರುದ್ಧ ಆರೋಪ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿ ನ್ಯಾ. ಅನಿಲ್ ಎಚ್. ಲಡ್ಡಾಡ್ ಆದೇಶ ಹೊರಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಿಜೆಪಿ ವಿಕೆಟ್‌ಗಳು ಪತನ: ಬಾಬಾ ಸಿಎಂಗೆ ಕ್ರಿಕೆಟ್ ಆಡಲು ಬರಲ್ಲ; ಅಖಿಲೇಶ್ ಯಾದವ್ ಲೇವಡಿ
ಜಲ್ಲಿಕಟ್ಟು ಸ್ಪರ್ಧೆ: ಓರ್ವ ಸಾವು, 80 ಮಂದಿಗೆ ಗಾಯ
ಯುವಕನ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ: ಅಂತಿಮ ತನಿಖಾ ವರದಿ ಬಹಿರಂಗ
ಬೆಂಗಳೂರು ಮಾಲ್ ನಲ್ಲಿ ಅಗ್ನಿ ಅವಘಡ