ಸಾಹಿತಿ ಚಂದ್ರಶೇಖರ್ ಕಂಬಾರ ಅವರಿಗೆ ಪತ್ನಿ ವಿಯೋಗ - Mahanayaka
5:08 AM Wednesday 11 - December 2024

ಸಾಹಿತಿ ಚಂದ್ರಶೇಖರ್ ಕಂಬಾರ ಅವರಿಗೆ ಪತ್ನಿ ವಿಯೋಗ

kambar
18/01/2022

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರ ಪತ್ನಿ ಸತ್ಯಭಾಮಾ ಸಿ. ಕಂಬಾರ ನಿಧನರಾಗಿದ್ದಾರೆ.

ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, 15 ದಿನ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.ವೈದ್ಯರ ನಿರಂತರ ಶ್ರಮ ಫಲಕೊಟ್ಟಿಲ್ಲ.

ಅವರು ಇಂದು ಬೆಳಗ್ಗೆ 6:15 ಕ್ಕೆ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ 9:30ಕ್ಕೆ ಕತ್ರಿಗುಪ್ಪೆಯ ಸಿರಿ ಸಂಪಿಗೆ ಮನೆಯಲ್ಲಿ ಮೃತರ ಅಂತಿಮ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸತ್ಯಭಾಮಾ ಅವರು ಪತಿ ಡಾ. ಚಂದ್ರಶೇಖರ್ ಕಂಬಾರ, ಒಬ್ಬ ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು, ಬಂಧು ಬಳಗ, ಆಪ್ತರನ್ನು ಅಗಲಿದ್ದಾರೆ. ಸತ್ಯಭಾಮಾ ನಿಧನಕ್ಕೆ ಸಾರಸ್ವತ ಕ್ಷೇತ್ರದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ಬೈಕ್‌ ಗೆ ಲಾರಿ ಡಿಕ್ಕಿ; ಇಬ್ಬರ ಸಾವು

ಮಾನವಹಕ್ಕುಗಳ ಉಲ್ಲಂಘನೆ: 12 ಸಾವಿರಕ್ಕೂ ಹೆಚ್ಚು ಮಂದಿಯ ಅಕ್ರಮ ಬಂಧನ; ವಿಶ್ವಸಂಸ್ಥೆ ಕಳವಳ

ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಶಿಕ್ಷಕಿಗೆ ಅವಹೇಳನಾಕಾರಿ ಗಿಫ್ಟ್ ನೀಡಿದ ಮನೆ ಮಾಲಿಕ: ಆರೋಪಿ ವಿರುದ್ಧ ಎಫ್ ಐಆರ್

 

ಇತ್ತೀಚಿನ ಸುದ್ದಿ