3 ಮಕ್ಕಳ ಸಾವು ಪ್ರಕರಣ: ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ; ಅಧಿಕಾರಿಗಳಿಂದ ಮಾಹಿತಿ - Mahanayaka
3:00 AM Wednesday 11 - December 2024

3 ಮಕ್ಕಳ ಸಾವು ಪ್ರಕರಣ: ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ; ಅಧಿಕಾರಿಗಳಿಂದ ಮಾಹಿತಿ

rubella
18/01/2022

ಬೆಳಗಾವಿ: ಬೆಳಗಾವಿಯಲ್ಲಿ ರುಬೆಲ್ಲಾ ಲಸಿಕೆ ಪಡೆದ ಮೂವರು ಮಕ್ಕಳ ಸಾವಿಗೆ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್‌ಸಿಎಚ್ಒ) ಈಶ್ವರಪ್ಪ ಗಡದ್ ಸೋಮವಾರ ಹೇಳಿದ್ದಾರೆ.

ಆರೋಗ್ಯ ಸಿಬ್ಬಂದಿ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜ.10ರಂದು ಲಸಿಕೆ ಸಂಗ್ರಹಿಸಿದ್ದಾರೆ. ಬಳಿಕ ಬಳಕೆಯಾಗದ ಲಸಿಕೆಯನ್ನೂ ಇದೇ ದಿನ ಹಿಂತಿರುಗಿಸಬೇಕಿತ್ತು. ಆದರೆ, ಲಸಿಕೆಯನ್ನು ಹಿಂತಿರುಗಿಸದೆ ಹಳೆಯ ಲಸಿಕೆಯಿಟ್ಟಿದ್ದ ಬಾಕ್ಸ್ ನಲ್ಲಿಯೇ ಲಸಿಕೆಗಳನ್ನು ಇಟ್ಟಿದ್ದಾರೆ. ನಂತರ ಜ. 11 ಮತ್ತು 12ರಂದು ಮಕ್ಕಳಿಗೆ ಲಸಿಕೆಗಳನ್ನು ನೀಡಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯ ವರ್ತನೆಯಿಂದಾಗಿ ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಮಕ್ಕಳಿಗೆ ನೀಡುವ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಐಎಲ್ಆರ್ ರೆಫ್ರಿಜರೇಟರ್ ನಲ್ಲಿಯೇ ಇಡಬೇಕು. 2 ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಲಸಿಕೆ ಇಡಬೇಕು. ಆದರೆ, ಲಸಿಕಾಕರಣಕ್ಕಾಗಿ ಜ.10ರಂದು ಲಸಿಕೆ ವಯಲ್ ತೆಗೆದುಕೊಂಡಿದ್ದ ಆರೋಗ್ಯ ಸಿಬ್ಬಂದಿ 2 ದಿನ ಹೋಟೆಲ್‌ನ ಫ್ರಿಡ್ಜ್ ನಲ್ಲಿಟ್ಟಿದ್ದರು. ಬಳಿಕ ಲಸಿಕೆ ವಾಪಸ್ ತೆಗೆದುಕೊಂಡಿರುವ ಸಿಬ್ಬಂದಿ ವಾಪಸ್ ಐಎಲ್ಆರ್ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದರೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ ಲಸಿಕೆಯನ್ನು ಮಕ್ಕಳಿಗೆ ನೀಡಿದ್ದಾರೆ. ಇದರ ಪರಿಣಾಮ ಜ. 12ರಂದು ಒಂದು ಮತ್ತು ಜ.16ರಂದು ಇಬ್ಬರು ಮಕ್ಕಳು ಮೃತಪಟ್ಟಿದ್ದರು.

ಇನ್ನಿಬ್ಬರು ಮಕ್ಕಳಲ್ಲೂ ವಾಂತಿ, ಭೇದಿ, ಜ್ವರ ಲಕ್ಷಣಗಳು ಕಂಡು ಬಂದಿದ್ದು, ಈಗಲೂ ಇಬ್ಬರೂ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಇಬ್ಬರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ತನಿಖಾ ವರದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ, ನರ್ಸ್ ಹಾಗೂ ಫಾರ್ಮಸಿಸ್ಟ್‌ನ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತ ವೈದ್ಯಕೀಯ ವರದಿ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು, ಸಿಬ್ಬಂದಿ ಲಸಿಕೆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಾಳಿಂಬೆಯ ಸೇವನೆಯಿಂದ ಸಿಗಲಿದೆ ಅದ್ಭುತ ಪ್ರಯೋಜನಗಳು

ವೈದ್ಯನ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಲೂಟಿ

5ಜಿ ಸೇವೆ ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು: ಅಮೆರಿಕ ಏರ್ ​ಲೈನ್ಸ್​ ಕಂಪನಿ ಸಿಇಒಗಳ ಎಚ್ಚರಿಕೆ

ಹಳಿ ತಪ್ಪಿದ ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು; ತಪ್ಪಿದ ದುರಂತ

ನಾರಾಯಣ ಗುರುಗಳ ವಿಚಾರ ಮುಂದಿಟ್ಟು ಕೇರಳದಿಂದ ಅನವಶ್ಯಕ ವಿವಾದ: ಸಚಿವ ಸುನಿಲ್ ಕುಮಾರ್

 

ಇತ್ತೀಚಿನ ಸುದ್ದಿ