ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ: 40 ಮಂದಿಯ ವಿರುದ್ಧ ಕೇಸ್!
ಧರ್ಮಪುರಿ: 1 ಕೆ.ಜಿ. ಚಿಕನ್ ಚಿಲ್ಲಿ ಹಾಗೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದವರ ಮೇಲೆ ಕೇಸು ದಾಖಲಿಸಿರುವ ಘಟನೆ ಧರ್ಮಪುರಿಯ ಮುಕ್ಕಲನಾಯಕನಪಟ್ಟಿ ಗ್ರಾಮದಲ್ಲಿ ನಡೆದಿದೆ.
ಪೊಂಗಲ್ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಪ್ರತಿ ವರ್ಷ ಈ ಸ್ಪರ್ಧೆಯನ್ನು ಇಲ್ಲಿ ಆಯೋಜಿಸುತ್ತಿದ್ದರು. ಸ್ಪರ್ಧೆಯಲ್ಲಿ 15 ಕೆ.ಜಿ. ಚಿಕನ್ ಫ್ರೈ ಮಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಇನ್ನೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಒಟ್ಟು 21 ಮಂದಿ ಯುವಕರು ಭಾಗಿಯಾಗಿದ್ದರು.
ಕೊವಿಡ್ ಹಿನ್ನೆಲೆಯಲ್ಲಿ ಭಾನುವಾರ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಆದರೆ, ಲಾಕ್ ಡೌನ್ ನಡುವೆಯೇ ಚಿಕನ್ ಚಿಲ್ಲಿ ಹಾಗೂ ಚಿಕನ್ ಬಿರಿಯಾನಿ ತಿನ್ನುವ ಸ್ಪರ್ಧೆ ಆಯೋಜಿಸಿದ್ದಕ್ಕಾಗಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಒಟ್ಟು 40 ಯುವಕರ ಮೇಲೆ ಕೇಸ್ ಹಾಕಲಾಗಿದೆ. ಕೊವಿಡ್ ನೆಪದಲ್ಲಿ ಜನರ ಸಂತಸವನ್ನು ಕಸಿದುಕೊಳ್ಳುವ ನಿಯಮಗಳ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನರಗುಂದದಲ್ಲಿ ಮುಸ್ಲಿಮ್ ಯುವಕನ ಹತ್ಯೆ ಪ್ರಕರಣ: ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ
ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಹೈಕೋಟ್‌ನಿಂದ ಆರೋಪಿಯ ಜಾಮೀನು ಅರ್ಜಿ ವಜಾ
ಬಿಹಾರ: 4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ; ಕಂಗಾಲಾದ ಕುಟುಂಬಸ್ಥರು
ಜ.26ರಿಂದ 12 ಜಿಲ್ಲೆಗಳಲ್ಲಿ ‘ಗ್ರಾಮ ಒನ್ ಯೋಜನೆ’ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ