ಕಿರಾತಕ ಚಿತ್ರದ ನಿರ್ದೇಶಕ, 46 ವರ್ಷದ ವಯಸ್ಸಿನ ಪ್ರದೀಪ್ ರಾಜ್ ನಿಧನ
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಅವರು ನಿಧನರಾಗಿದ್ದು, 46 ವರ್ಷ ವಯಸ್ಸಿನ ಪ್ರದೀಪ್ ರಾಜ್ ಅವರು ಹಲವು ವರ್ಷಗಳಿಂದ ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊವಿಡ್ ಸೋಂಕು ತಗಲಿತ್ತು ಎಂದು ತಿಳಿದು ಬಂದಿದೆ.
ಯಶ್ ಅಭಿನಯದ ಕಿರಾತಕ ಕನ್ನಡ ಚಿತ್ರವನ್ನು ಪ್ರದೀಫ್ ರಾಜ್ ನಿರ್ದೇಶಿಸಿದ್ದರು. ಖ್ಯಾತ ನಟ ಸತೀಶ್ ನೀನಾಸಂ ನಟನೆಯ ‘ಅಂಜದ ಗಂಡು’, ಕಾರ್ತಿಕ್ ಜಯರಾಮ್, ಚಿಕ್ಕಣ್ಣ ಮೊದಲಾದವರು ಅಭಿನಯಿಸಿದ್ದ ಬೆಂಗಳೂರು 560023, ದುನಿಯಾ ವಿಜಯ್ ನಟನೆಯ ರಜನಿ ಕಾಂತ ಮೊದಲಾದ ಚಿತ್ರಗಳಲ್ಲಿ ಇವರು ನಿರ್ದೇಶಕರಾಗಿದ್ದರು.
ಕಳೆದ 6 ತಿಂಗಳಿನಿಂದ ಪ್ರದೀಪ್ ರಾಜ್ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಕೊವಿಡ್ ಸೋಂಕು ತಗಲಿತ್ತು. ಲಿವರ್ ಸಮಸ್ಯೆ ಕೂಡ ಆಗಿತ್ತು. 15 ವರ್ಷಗಳಿಂದ ಅವರಿಗೆ ಡಯಾಬಿಟಿಸ್ ಇತ್ತು ಎಂದು ಅವರು ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರದೀಪ್ ರಾಜ್ ಅವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ಗಂಟೆಗೆ ಅವರ ಸ್ವಂತ ಊರಾದ ಪಾಂಡಿಚೇರಿಯಲ್ಲಿ ನಡೆಯಲಿದೆ. ಪ್ರದೀಪ್ ರಾಜ್ ನಿಧನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಬಿಜೆಪಿ ಮುಖಂಡ!
ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು
ನಟಿ ದಿವ್ಯಾ ಸುರೇಶ್ ಗೆ ಅಪಘಾತ: ಕೈ, ಕಾಲು, ಮುಖಕ್ಕೆ ಗಂಭೀರ ಗಾಯ
ಹೃದಯ ವಿದ್ರಾವಕ ಘಟನೆ: ಸಂಪ್ ತೊಳೆಯಲು ಹೋಗಿದ್ದ ತಂದೆ-ಮಗ ವಿದ್ಯುತ್ ಶಾಕ್ ಹೊಡೆದು ಸಾವು