ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಕಲಾವಿದ ರಸ್ತೆ ಅಪಘಾತಕ್ಕೆ ಬಲಿ
ಮೂಡುಬಿದಿರೆ: ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮೂಡುಬಿದಿರೆ-ವೇಣೂರು ರಸ್ತೆಯ ಗಂಟಾಲ್ ಕಟ್ಟೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕುಂದಾಪುರ ಹಿರಿಯಡ್ಕ ಮೇಳದ ಹಿರಿಯ ಕಲಾವಿದ ವೇಣೂರು ವಾಮನ ಕುಮಾರ್(46 ) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಇಂದು ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವಾಗ ಗಂಟಾಲ್ಕಟ್ಟೆ ಬಳಿ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಇವರು ಕಿಶನ್ ಹೆಗ್ಡೆ ಎಂಬವರ ಸಂಚಾಲಕತ್ವದ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿ ಮತ್ತು ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಿರಾತಕ ಚಿತ್ರದ ನಿರ್ದೇಶಕ, 46 ವರ್ಷದ ವಯಸ್ಸಿನ ಪ್ರದೀಪ್ ರಾಜ್ ನಿಧನ
ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಬಿಜೆಪಿ ಮುಖಂಡ!
ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು
ನಟಿ ದಿವ್ಯಾ ಸುರೇಶ್ ಗೆ ಅಪಘಾತ: ಕೈ, ಕಾಲು, ಮುಖಕ್ಕೆ ಗಂಭೀರ ಗಾಯ
ಹೃದಯ ವಿದ್ರಾವಕ ಘಟನೆ: ಸಂಪ್ ತೊಳೆಯಲು ಹೋಗಿದ್ದ ತಂದೆ-ಮಗ ವಿದ್ಯುತ್ ಶಾಕ್ ಹೊಡೆದು ಸಾವು