ಅಫ್ಘಾನಿಸ್ತಾನ: ಗುಂಡಿನ ದಾಳಿಗೆ ತಾಲಿಬಾನ್ ಕಮಾಂಡರ್, ಆತನ ಪುತ್ರ ಸೇರಿ 6 ಮಂದಿ ಸಾವು
ಕಾಬೂಲ್: ಪೂರ್ವ ಕುನಾರ್ ಪ್ರಾಂತ್ಯದಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಮತ್ತು ಅವರ ಪುತ್ರ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ವೈಯುಕ್ತಿಕ ದ್ವೇಷದಿಂದಲೇ ಈ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ವೈಯಕ್ತಿಕ ವಿಚಾರವಾಗಿ ಕಮಾಂಡರ್ ಹತ್ಯೆ ನಡೆಯುವುದು ಅಫ್ಘಾನಿಸ್ತಾನದಲ್ಲಿ ಅಪರೂಪದ ವಿಚಾರವಾಗಿದೆ.
ಇತ್ತೀಚೆಗೆ ತಾಲಿಬಾನ್ ಪಡೆಗಳೂ ನಾಗರಿಕರ ಮೇಲೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿರುವುದು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಹೆರಾತ್ ಪ್ರಾಂತ್ಯದ ಕಜೇಮಿ ಪ್ರದೇಶದಲ್ಲಿ ತಾಲಿಬಾನಿಗಳು ಗುಂಡುಹಾರಿಸಿ, ಒಬ್ಬ ಕಾರು ಚಾಲಕ ಮತ್ತು ವೈದ್ಯರೊಬ್ಬರನ್ನು ಹತ್ಯೆಗೈದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗ್ರಾಹಕನ ಮುಖ ಕೆಂಪಗಾಗಿಸಿದ ವೀಳ್ಯದೆಲೆ: ಒಂದು ಕಟ್ಟು ವೀಳ್ಯದೆಲೆಗೆ 150 ರೂ.!
ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಕಲಾವಿದ ರಸ್ತೆ ಅಪಘಾತಕ್ಕೆ ಬಲಿ
ಕಿರಾತಕ ಚಿತ್ರದ ನಿರ್ದೇಶಕ, 46 ವರ್ಷದ ವಯಸ್ಸಿನ ಪ್ರದೀಪ್ ರಾಜ್ ನಿಧನ
ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಬಿಜೆಪಿ ಮುಖಂಡ!