ಮತಯಂತ್ರ ಕೆಟ್ಟಿಲ್ಲ, ಮನಸ್ಸುಗಳು ಕೆಟ್ಟಿದೆ | ಸಚಿವ ಕೋಟ ಶ್ರೀನಿವಾಸ್ ಪೂಜಾರಿ - Mahanayaka

ಮತಯಂತ್ರ ಕೆಟ್ಟಿಲ್ಲ, ಮನಸ್ಸುಗಳು ಕೆಟ್ಟಿದೆ | ಸಚಿವ ಕೋಟ ಶ್ರೀನಿವಾಸ್ ಪೂಜಾರಿ

18/11/2020

ಮಂಗಳೂರು:  ಕಾಂಗ್ರೆಸ್ ಸೋತ ಕಡೆಗಳಲ್ಲಿ ಎಲ್ಲ ಮತಯಂತ್ರಗಳು ಹಾಳಾಗಿದೆ ಅನ್ನುತ್ತಾರೆ, ಹಾಗಿದ್ದರೆ ಗೆದ್ದ ಕಡೆ ಮತಯಂತ್ರ ಏನಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದರು.


Provided by

ಸಿದ್ದರಾಮಯ್ಯ ಗೆದ್ದಾಗ ಮತಯಂತ್ರ ಸರಿಯಾಗಿತ್ತು. ಈಗ ಸೋತಾಗ ಹಾಳಾಗಿ ಹೋಗಿದೆ ಎಂದು ಹೇಳುತ್ತಿದ್ದಾರೆ. ಇಂತಹ ಮಾತುಗಳು ಅವರಂತಹ ದೊಡ್ಡವರಿಗೆ ಭೂಷಣವಲ್ಲ ಎಂದು ಕೋಟ ಹೇಳಿದರು.

ಯಾವುದೇ ಪಕ್ಷವಿರಲಿ ಸೋಲು ಗೆಲುವನ್ನು ಸಮಾನಾಗಿ ತೆಗೆದುಕೊಳ್ಳಬೇಕು, ಗೆದ್ದಾಗ ಒಂದು ಸೋತಾಗ ಒಂದು ಮಾತಗಳನ್ನಾಡಬಾರದು. ಮತಯಂತ್ರ ಕೆಟ್ಟಿಲ್ಲ, ಕೆಟ್ಟಿರುವುದು ಮನಸ್ಸು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಇತ್ತೀಚಿನ ಸುದ್ದಿ