ಮಹಿಳೆಯ ಕೊಲೆ ಪ್ರಕರಣ; ಬಿಜೆಪಿ ಕೌನ್ಸಿಲರ್ ಬಂಧನ - Mahanayaka
6:01 AM Thursday 12 - December 2024

ಮಹಿಳೆಯ ಕೊಲೆ ಪ್ರಕರಣ; ಬಿಜೆಪಿ ಕೌನ್ಸಿಲರ್ ಬಂಧನ

arrest
21/01/2022

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಶೂಟೌ ಟ್ ನಡೆಸಿ ಮಹಿಳೆಯನ್ನು ಹತ್ಯೆ ಗೈದಿರುವ ಪ್ರಕರಣವನ್ನು ಸಂಕೇಶ್ವರ ಪೊಲೀಸರು ಭೇದಿಸಿದ್ದು, ಹತ್ಯೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಪುರಸಭೆ ಸದಸ್ಯ ಉಮೇಶ್ ಕಾಂಬಳೆ ಬಂಧಿತ ಆರೋಪಿ. ಕಳೆದ ಜ.16ರಂದು ನಾಡ ಪಿಸ್ತೂಲ್‍ ನಿಂದ ಶೈಲಜಾ ಅಲಿಯಾಸ್ ಗೌರವ್ವ ಸುಭೇದಾರ್ (56) ಮಹಿಳೆಯ ಎದೆಗೆ ಹಾಗೂ ಕೈಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಪ್ರಕರಣದ ಬೆನ್ನತ್ತಿದ್ದ ಸಂಕೇಶ್ವರ ಪಿಎಸ್‍ ಐ ಗಣಪತಿ ಕೊಂಗನೊಳ್ಳಿ ಹಾಗೂ ಸಿಪಿಐ ರಮೇಶ್ ಛಾಯಾಗೋಳ, ಹವಾಲ್ದಾರ್ ಭೀಮಪ್ಪ ನಾಗನೂರೆ, ಬಸವರಾಜ ಕಪರಟ್ಟಿ ಅವರ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮಹಿಳೆಯಿಂದ 25 ಲಕ್ಷ ರೂ. ಉಮೇಶ ಕಾಂಬಳೆ ಪಡೆದಿದ್ದ. ಬಡ್ಡಿ ಸಮೇತ ಹಣ ಹಿಂದಿರಿಗಿಸಲು ಮಹಿಳೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರಕರಣದ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ನಡೆದ ಮೂರೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಾಡಹಗಲೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪಿಎಸ್ ​ಐ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ರಚನಾ ಹನುಮಂತ ರಾಜ್ಯಕ್ಕೆ ಪ್ರಥಮ

ಕ್ರೈಸ್ತ ಧಾರ್ಮಿಕ ಸಮಾರಂಭದಲ್ಲಿ ಕಾಲ್ತುಳಿತ; 29 ಮಂದಿ ಸಾವು

ಲಾಹೋರ್ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ; 3 ಸಾವು, 20 ಮಂದಿಗೆ ಗಾಯ

ಗರ್ಭಿಣಿ ಅರಣ್ಯ ರಕ್ಷಕಿ ಮೇಲೆ ದಂಪತಿಯಿಂದ ಥಳಿತ

 

ಇತ್ತೀಚಿನ ಸುದ್ದಿ