“ಮಾಯಾವತಿ ಮಂಕಾದರೆ? ಚುನಾವಣೆ ಸಮೀಪಿಸಿದರೂ ಪ್ರಚಾರ ಮಾಡುತ್ತಿಲ್ಲ”!
ಉತ್ತರಪ್ರದೇಶ: ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದರೂ, ಬಿಎಸ್ ಪಿ ವರಿಷ್ಠೆ ಮಾಯಾವತಿ ಯಾಕೆ ಮಂಕಾಗಿದ್ದಾರೆ ಎಂದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಪ್ರಚಾರದ ವೈಖರಿ ಬಗ್ಗೆ ನನಗೆ ಆಶ್ಚರ್ಯವಾಗಿದೆ. ಮಾಯಾವತಿ ತಮ್ಮ ಎಂದಿನ ಶೈಲಿಯಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬ ಉತ್ತರ ಪ್ರದೇಶದ ಜನರ ನಂಬಿಕೆಯನ್ನು ನಾನೂ ಒಪ್ಪಿಕೊಳ್ಳುತ್ತೇನೆ, ಆದರೆ ಇದು ನನಗೆ ಅಚ್ಚರಿ ಮೂಡಿಸುತ್ತಿದೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾಯವತಿಯವರ ಪಕ್ಷ ಕಳೆದ ಆರು-ಏಳು ತಿಂಗಳಿನಿಂದ ಅಷ್ಟರ ಮಟ್ಟಿಗೆ ಸಕ್ರಿಯವಾಗಿಲ್ಲ. ವಿಧಾನಸಭೆ ಚುನಾವಣೆ ಘೋಷಣೆ ನಂತರದಲ್ಲಿ ಮತ್ತೆ ಸಕ್ರಿಯರಾಗಬಹುದು ಎಂದು ನಾವು ಭಾವಿಸಿದ್ದೇವು, ಆದರೆ ಈಗ ನನಗೂ ಆಶ್ಚರ್ಯವಾಗುತ್ತಿದೆ. ಏಕೆಂದರೆ ರಾಜ್ಯದಲ್ಲಿ ಚುನಾವಣೆ ಶುರುವಾಗಿದ್ದು, ನಾವು ಚುನಾವಣೆಯ ಮಧ್ಯದಲ್ಲಿದ್ದೇವೆ. ಈ ಹಂತದಲ್ಲಿಯೂ ಬಿಎಸ್ಪಿ ಸಕ್ರಿಯವಾಗದಿರುವುದು ನಮಗೂ ತುಂಬಾ ಆಶ್ಚರ್ಯವಾಗುವಂತೆ ಮಾಡಿದೆ ಎಂದು ಪ್ರಿಯಾಂಕಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮನೆ ಕಟ್ಟಲು ಬಿಡದ ಪಿಡಿಒ: ಹೈಟೆನ್ಶನ್ ಕಂಬವೇರಿ ರೈತ ಆತ್ಮಹತ್ಯೆಗೆ ಯತ್ನ
ಪೊಲೀಸ್ ಮಾಹಿತಿದಾರನನ್ನು ಕೊಂದು, ಮೂರು ವಾಹನಕ್ಕೆ ಬೆಂಕಿಯಿಟ್ಟ ನಕ್ಸಲರು!
ಹಸುವನ್ನು ಮೇಯಿಸಲು ಹೋಗಿದ್ದ ವೃದ್ಧ ಹುಲಿ ದಾಳಿಗೆ ಬಲಿ!
ಹಾಲು, ನೀರು, ವಿದ್ಯುತ್ ದರ ಏರಿಕೆ ಬಗ್ಗೆ ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ