ಪ್ಲಾಸ್ಟಿಕ್ ಅಂಗಡಿಗಳು ಬೆಂಕಿಗೆ ಆಹುತಿ: ಇಬ್ಬರು ಸಜೀವ ದಹನ
ವಿಜಯಪುರ: ಪ್ಲಾಸ್ಟಿಕ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ನೋಡ ನೋಡುತ್ತಿದ್ದಂತೆ ಎರಡು ಅಂಗಡಿಗಳು ಬೆಂಕಿಗೆ ಆಹುತಿಯಾಗಿ, ಅದರೊಳಗೆ ಮಲಗಿದ್ದ ಇಬ್ಬರು ಸಜೀವ ದಹನವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ನಿಡಗುಂದಿ ತಾಲೂಕಿನ ಬಸವನ ಬಾಗೇವಾಡಿ ಕ್ರಾಸ್ ಬಳಿ ನಡೆದಿದೆ.
ಅಶೋಕ ದೇಸ್ನೂಯಿ(25) ಹಾಗೂ ಲಿಂಬಾರಾಮ ದೇಸ್ನೂಯಿ(35) ಮೃತ ದುರ್ದೈವಿಗಳು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸಾಲು ಸಾಲಾಗಿದ್ದ ಏಳು ಪ್ಲಾಸ್ಟಿಕ್ ಅಂಗಡಿಗಳನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಸ್ತೆ ಅಪಘಾತಕ್ಕೆ ಕರ್ತವ್ಯ ನಿರತ ಅರಣ್ಯಾಧಿಕಾರಿ ಸಾವು
ಕೊವಿಡ್ ನಿಯಮ: ತನ್ನ ಮದುವೆಯನ್ನೇ ರದ್ಧುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ
“ಮಾಯಾವತಿ ಮಂಕಾದರೆ? ಚುನಾವಣೆ ಸಮೀಪಿಸಿದರೂ ಪ್ರಚಾರ ಮಾಡುತ್ತಿಲ್ಲ”!
ಮನೆ ಕಟ್ಟಲು ಬಿಡದ ಪಿಡಿಒ: ಹೈಟೆನ್ಶನ್ ಕಂಬವೇರಿ ರೈತ ಆತ್ಮಹತ್ಯೆಗೆ ಯತ್ನ
ಪೊಲೀಸ್ ಮಾಹಿತಿದಾರನನ್ನು ಕೊಂದು, ಮೂರು ವಾಹನಕ್ಕೆ ಬೆಂಕಿಯಿಟ್ಟ ನಕ್ಸಲರು!