ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ - Mahanayaka
3:13 AM Wednesday 11 - December 2024

ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

ramnagar
26/01/2022

ರಾಮನಗರ: ಗಂಡನ ಕಿರುಕುಳ ತಾಳಲಾರದೇ ತವರು ಮನೆಯಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ.

ಮೃತ ಗರ್ಭಿಣಿಯನ್ನು ಜಾನ್ಹವಿ (23) ಎಂದು ಗುರುತಿಸಲಾಗಿದ್ದು, ಈಕೆ 5 ತಿಂಗಳ ಗರ್ಭಿಣಿಯಾಗಿದ್ದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕರ್ಣ ಎಂಬವರ ಜೊತೆ 9 ತಿಂಗಳ ಹಿಂದೆ ಜಾನ್ಹವಿ ವಿವಾಹವಾಗಿದ್ದರು.

ಜಾನ್ಹವಿಗೆ ಪ್ರತಿನಿತ್ಯ ಪತಿ ಕರ್ಣ ಹೊಡೆದು ಚಿತ್ರ ಹಿಂಸೆ ನೀಡುತ್ತಿದ್ದನು. ಹೀಗಾಗಿ ಹಿಂಸೆ ತಾಳಲಾಗದೇ ಒಂದು ತಿಂಗಳ ಹಿಂದೆ ಜಾನ್ಹವಿ ತವರು ಮನೆಗೆ ಬಂದಿದ್ದಳು. ಆದರೂ ಫೋನ್ ಮಾಡಿ ಜಾನ್ಹವಿಗೆ ಹಿಂಸೆ ನೀಡುತ್ತಿದ್ದ, ಈ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಾನ್ಹವಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಘಟನೆ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಸಂವಿಧಾನ ದಿನದಂದೇ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸರ್ಕಾರದಿಂದ ಅಗೌರವ!

ನಾರಾಯಣ ಗುರುಗಳ ಬಗ್ಗೆ ಎಲ್ಲರಿಗೂ ಅಭಿಮಾನ ಇದೆ: ಸಚಿವ ಎಸ್.ಅಂಗಾರ

ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಎಸೆದ ಆರೋಪಿಗಳ ಬಂಧನ

ಮಾನವ ಕಳ್ಳಸಾಗಣೆ: 41 ಆರೋಪಿಗಳಿಗೆ ಕಠಿಣ ಶಿಕ್ಷೆ

ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್‌ ಗೆ ಹೋಗುತ್ತಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

 

ಇತ್ತೀಚಿನ ಸುದ್ದಿ