ಡಿವೈಡರ್ ಗೆ ಕಾರು ಡಿಕ್ಕಿ: ಚಾಲಕ ಸೇರಿ ಇಬ್ಬರು ಗಂಭೀರ
ಬೆಂಗಳೂರು: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಗರದ ಮಲ್ಲೇಶ್ವರಂನ ಮಂತ್ರಿಮಾಲ್ ಬಳಿ ನಡೆದಿದೆ.
ವೇಗವಾಗಿ ಬಂದ ಕಾರು ಡಿವೈಡರ್ ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಎರಡು ಏರ್ಬ್ಯಾಗ್ಗಳು ತೆರೆದಿವೆ. ಘಟನೆಯಲ್ಲಿ ಕಾರು ಚಾಲಕ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತವಾದ ಕಾರಿನಲ್ಲಿ ಮದ್ಯ ಬಾಟಲಿ ಪತ್ತೆಯಾಗಿದ್ದು, ಕುಡಿತ ಮತ್ತಿನಲ್ಲಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಮುಳುಗುತ್ತಿರುವ ಹಡಗು: ಸಚಿವ ಅಂಗಾರ
ಅಂಬೇಡ್ಕರ್ ಪ್ರತಿಮೆಗೆ ಅವಮಾನ: ವಿಧಾನಸೌಧದ ಎದುರು ಸಂವಿಧಾನ ಪರ ಸಂಘಟನೆಗಳಿಂದ ಪ್ರತಿಭಟನೆ
ತುಲುನಾಡ್ ಮನ್ಸ ಸಮಾಜ ಸೇವಾ ಸಂಘದಿಂದ ಸಂವಿಧಾನ ದಿನಾಚರಣೆ
ಅನ್ಯಜಾತಿ ಹುಡುಗಿಯೊಂದಿಗೆ ಮದುವೆ: ಲೈಟ್ ಕಂಬಕ್ಕೆ ಕಟ್ಟಿ ಹುಡುಗನ ತಾಯಿ ಮೇಲೆ ಹಲ್ಲೆ
ಸ್ಟೇರಿಂಗ್ ತುಂಡಾಗಿ ಬಸ್ ಪಲ್ಟಿ: 20 ಮಂದಿ ಗಂಭೀರ