ಅನ್ಯಜಾತಿ ಹುಡುಗಿಯೊಂದಿಗೆ ಮದುವೆ: ಲೈಟ್ ಕಂಬಕ್ಕೆ ಕಟ್ಟಿ ಹುಡುಗನ ತಾಯಿ ಮೇಲೆ ಹಲ್ಲೆ - Mahanayaka
5:24 AM Wednesday 11 - December 2024

ಅನ್ಯಜಾತಿ ಹುಡುಗಿಯೊಂದಿಗೆ ಮದುವೆ: ಲೈಟ್ ಕಂಬಕ್ಕೆ ಕಟ್ಟಿ ಹುಡುಗನ ತಾಯಿ ಮೇಲೆ ಹಲ್ಲೆ

marriage
27/01/2022

ಚೆನ್ನೈ: ಅನ್ಯ ಜಾತಿಯ ಹುಡುಗಿಯೊಂದಿಗೆ ಮಗ ಓಡಿಹೋಗಿ ಇಬ್ಬರು ವಿವಾಹವಾಗಿದ್ದಕ್ಕೆ ಆತನ 45 ವರ್ಷದ ತಾಯಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಗ್ಯಾಂಗ್‍ವೊಂದು ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ ಬ್ಲಾಕ್‍ನ ಕೆ.ವಾಗೈಕುಲಂ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಅರುಪ್ಪುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಡುಗಿಯ ತಾಯಿ ಸೇರಿದಂತೆ 14 ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಮೀನಾಕ್ಷಿ ತಾಯಿ ದೂರು ನೀಡಿದ್ದು, ಈ ದೂರಿನ್ವಯ ಪರಾಳಚಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜನವರಿ 22ರಂದು ಮೀನಾಕ್ಷಿ ಅವರ ಮಗ ಅದೇ ಗ್ರಾಮದ ಬೇರೆ ಜಾತಿ ಹುಡುಗಿಯೊಂದಿಗೆ ಓಡಿಹೋಗಿ, ಇಬ್ಬರು ವಿವಾಹವಾಗಿದ್ದಾರೆ. ಅಲ್ಲದೇ ಆಶ್ರಯ ಕೋರಿ ಅರುಪ್ಪುಕೊಟ್ಟೈ ಎಲ್ಲಾ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.

ಇದಾದ ಮೂರು ದಿನಗಳ ನಂತರ ಅಂದರೆ ಜ.ರಿ 25 ರಂದು ಹುಡುಗಿಯ ಸಂಬಂಧಿಕರು ಮತ್ತು ಇತರರು ಮೀನಾಕ್ಷಿ ಅವರ ಮನೆಗೆ ನುಗ್ಗಿ ಆಕೆಯನ್ನು ಹೊರಗೆಳೆದು, ಲೈಟ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಮ್ ಸೇನೆ ದಕ್ಷಿಣ ಕನ್ನಡ ವತಿಯಿಂದ ಸಂವಿಧಾನ ದಿನಾಚರಣೆ

ಸ್ಟೇರಿಂಗ್ ತುಂಡಾಗಿ ಬಸ್ ಪಲ್ಟಿ: 20 ಮಂದಿ ಗಂಭೀರ

ಸಂವಿಧಾನ ದಿನವೇ ಅಂಬೇಡ್ಕರ್ ಗೆ ಅವಮಾನ ಮಾಡಿದ ನ್ಯಾಯಾಧೀಶ: ಕೋರ್ಟ್ ಆವರಣದಲ್ಲಿಯೇ ಉದ್ಧಟತನದ ವರ್ತನೆ

ಗಣರಾಜ್ಯೋತ್ಸವ ವೇಳೆ ವಿದ್ಯುತ್ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಸಾವು

ನಾವು ಹಿಂದಿ ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಗೆ ವಿರೋಧ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

 

ಇತ್ತೀಚಿನ ಸುದ್ದಿ