ಟೋಲ್ ಕೇಂದ್ರಗಳಿಗೆ ಸುಲಿಗೆ ಮಾಡಲು ಇನ್ನೊಂದು ಅವಕಾಶ ನೀಡಿದ ಸರ್ಕಾರ - Mahanayaka
9:20 AM Thursday 12 - December 2024

ಟೋಲ್ ಕೇಂದ್ರಗಳಿಗೆ ಸುಲಿಗೆ ಮಾಡಲು ಇನ್ನೊಂದು ಅವಕಾಶ ನೀಡಿದ ಸರ್ಕಾರ

19/11/2020

ಬೆಂಗಳೂರು: ಜನರ ತೆರಿಗೆ ಹಣ ಪಡೆದು ಸರಿಯಾದ ರಾಷ್ಟ್ರೀಯ ಹೆದ್ದಾರಿ ಮಾಡುವ ಯೋಗ್ಯತೆ ಇಲ್ಲದ ಸರ್ಕಾರ ಜನರ ಸುಗಮ ಸಂಚಾರಕ್ಕೆ ಆಗಾಗ ತಡೆಯಾಗುತ್ತಿದೆ. ಜನರಂತೂ ನಾನು ಆ ಪಕ್ಷ, ನೀನು ಈ ಪಕ್ಷ ಎಂದು ಹೊಡೆದಾಡುತ್ತಿರುವುದರ ನಡುವೆಯೇ ಜನರ ಪ್ರಾಣ ಹಿಂಡುವ ಜಿಗಣೆಗಳಂತೆ ಟೋಲ್ ಸಂಗ್ರಹ ಗುತ್ತಿಗೆ ಕಂಪೆನಿಗಳು ವರ್ತಿಸುತ್ತಿವೆ.

ಈಗಾಗಲೇ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಜನರ ಗೋಳು ಕೇಳುವವರೇ ಇಲ್ಲದಾಗಿದೆ.  ದಿನಕ್ಕೊಂದು ಯಡವಟ್ಟಿಗೆ ಟೋಲ್ ಸಂಗ್ರಹಣಾ ಕೇಂದ್ರಗಳು ಕಾರಣವಾಗುತ್ತಿದೆ. ಈ ನಡುವೆ ಜನವರಿ 1ರ ಬಳಿಕ ಟೋಲ್ ಸಂಗ್ರಹ ದಾರಿಗಳಲ್ಲಿ ಸಂಚರಿಸಬೇಕಾದರೆ, ಫಾಸ್ಟ್ಯಾಗ್ ಕಡ್ಡಾಯವಾಗಿದೆ.  ಡಿಜಿಟಲ್ ಕ್ಯಾಶ್ ಹೆಸರಿನಲ್ಲಿ ಜನರಿಂದ ದುಪ್ಪಟ್ಟು ಲೂಟಿ ಮಾಡಲು ಟೋಲ್ ಸಂಗ್ರಹಣಾ ಕೇಂದ್ರಗಳು ಸಜ್ಜಾಗಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನರನ್ನು ಲೂಟಿ ಮಾಡಲೆಂದೇ ಟೋಲ್ ಸಂಗ್ರಹಣಾ ಕೇಂದ್ರಗಳಿಗೆ ಗುತ್ತಿಗೆ ನೀಡಿದೆ.  ಈ ಸುಲಿಗೆಯ ಮುಂದುವರಿದ ಭಾಗವಾಗಿ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ಯಾಗ್ ಮೂಲಕ ಸ್ಕ್ಯಾನ್ ಮಾಡಿಕೊಂಡು ವಾಹನಗಳು ಮುಂದಕ್ಕೆ ಚಲಿಸಬೇಕಿದೆ. ಒಂದು ವೇಳೇ ಫಾಸ್ಟ್ಯಾಗ್ ಮಾಡಿಕೊಳ್ಳದಿದ್ದರೆ, ನಿಮ್ಮಿಂದ ದುಪ್ಪಟ್ಟು ಹಣವನ್ನು ಟೋಲ್ ಸಂಗ್ರಹಣಾ ಕಂಪೆನಿ ಪಡೆಯುತ್ತದೆ ಎಂದು ವರದಿಯಾಗಿದೆ.

ಟೋಲ್ ಸಂಗ್ರಹಣಾ ರಸ್ತೆಗಳಲ್ಲಿ ಜನರು ಪ್ರಯಾಣಿಸುವುದು ಅನಿವಾರ್ಯ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಟೋಲ್ ಸಂಗ್ರಹಣೆ ಇಲ್ಲದ ರಸ್ತೆಗಳನ್ನು ಉದ್ದೇಶ ಪೂರ್ವಕವಾಗಿ ದುರಸ್ತಿ ಮಾಡದೇ ಬಿಡಲಾಗಿದೆ. ಇವುಗಳನ್ನು ಗಮನಿಸಿದರೆ, ಇದೊಂದು ಸರ್ಕಾರಿ ಪ್ರಾಯೋಜಿತ, ಲೂಟಿ ಕಾರ್ಯಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ.

ಸರ್ಕಾರವು ತಕ್ಷಣವೇ ಸರ್ಕಾರಿ ರಸ್ತೆಗಳು ನಿರ್ಮಿಸಬೇಕು. ಪ್ರೈವೇಟ್ ಸಂಸ್ಥೆಗಳು ಖಾಸಗಿ ಸೊತ್ತಾಗಿ ಮಾರ್ಪಾಡು ಮಾಡಿರುವ ರಸ್ತೆಯಲ್ಲಿ ಹಣ ಸುರಿದು ಪ್ರಯಾಣಿಸಿ ಜನರಿಗೆ ಸಾಕಾಗಿ ಹೋಗಿದೆ. ಹಾಗಾಗಿ ಸರ್ಕಾರವು ಸರ್ಕಾರದ ರಸ್ತೆಯನ್ನು ನಿರ್ಮಿಸಲಿ. ಟೋಲ್ ನೀಡಿ ಹೋಗಲು ಇಷ್ಟವಿಲ್ಲದವರು ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ.

ಟೋಲ್ ಸಂಗ್ರಹಣೆ ಪ್ರದೇಶಗಳಲ್ಲಿರುವ ಪ್ರರ್ಯಾಯ ರಸ್ತೆಗಳನ್ನು ಉದ್ದೇಶ ಪೂರ್ವಕವಾಗಿ ಹಾಳುಗಡೆವಿ, ಜನರು ಟೋಲ್ ಸಂಗ್ರಹಣಾ ರಸ್ತೆಯಲ್ಲಿ ಬರುವಂತೆ ಮಾಡಲಾಗುತ್ತಿದೆ. ಟೋಲ್ ಸಂಗ್ರಹಣ ಕೇಂದ್ರದ ಸಮೀಪದಲ್ಲಿರುವ ನಿವಾಸಿಗಳು ಇದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ