ಸಂವಿಧಾನದ ಪೀಠಿಕೆಯ ಅವಹೇಳನ | ಝೋಮೇಟೋದಿಂದ ಸಂವಿಧಾನದ ಪುಟ ವಿನ್ಯಾಸದ ದುರ್ಬಳಕೆ  - Mahanayaka
4:06 PM Thursday 12 - December 2024

ಸಂವಿಧಾನದ ಪೀಠಿಕೆಯ ಅವಹೇಳನ | ಝೋಮೇಟೋದಿಂದ ಸಂವಿಧಾನದ ಪುಟ ವಿನ್ಯಾಸದ ದುರ್ಬಳಕೆ 

zomato
27/01/2022

ಮಂಗಳೂರು: ನಿನ್ನೆಯಷ್ಟೇ ದೇಶಾದ್ಯಂತ ಪವಿತ್ರ ಸಂವಿಧಾನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದರೆ, ಈ ನಡುವೆ ಆಹಾರ ವಿತರಕ ಕಂಪೆನಿ ಝೋಮೆಟೋ  ಸಂವಿಧಾನದ ಪ್ರತಿಗೆ ಅವಮಾನವಾಗುವಂತೆ, ಜಾಹೀರಾತೊಂದನ್ನು ಪ್ರಕಟಿಸಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಿಪಬ್ಲಿಕ್ ಡೇಗೆ ಶುಭಕೋರುವ ಜಾಹೀರಾತನ್ನು ಪ್ರಕಟಿಸಿರುವ ಝೋಮೆಟೋ, ಭಾರತದ ಪವಿತ್ರ ಸಂವಿಧಾನದ ಪೀಠಿಕೆಯ ಪುಟದಂತೆ ಚಿತ್ರಿಸಿರುವ ಪುಟದಲ್ಲಿ “Constitution of Indian Foodies” ಎಂದು ಬರೆದು, ಊಟದ ಮೆನುವನ್ನು ಸಂವಿಧಾನದ ಪುಟದಂತೆ ಡಿಸೈನ್ ಮಾಡುವ ಮೂಲಕ ವಿವಾದ ಸೃಷ್ಟಿಸಿದೆ.

ಭಾರತದ ಸಂವಿಧಾನಕ್ಕೆ ತನ್ನದೇ ಆದ ಮಹತ್ವವಿದೆ. ಝೋಮೆಟೋ ತನ್ನ ಪ್ರಚಾರಕ್ಕಾಗಿ ಸಂವಿಧಾನದ ಪುಟ ವಿನ್ಯಾಸವನ್ನು ಆಹಾರದ ಮೆನುವಾಗಿ ಬಳಸಿಕೊಂಡಿರುವುದು ಸಂವಿಧಾನಕ್ಕೆ ಮಾಡುವ ಅವಹೇಳನವಲ್ಲವೇ? ಎನ್ನುವ ಆಕ್ರೋಶ ಇದೀಗ ಕೇಳಿ ಬಂದಿದೆ.

ಸಂವಿಧಾನದ ಪುಟ ವಿನ್ಯಾಸವನ್ನು ದುರ್ಬಳಕೆ ಮಾಡಿಕೊಂಡಿರುವ ಝೊಮೇಟೋ ದೇಶದ ಜನರ ಕ್ಷಮೆಯಾಚಿಸಬೇಕು.  ಸಂವಿಧಾನದ ಪುಟ ವಿನ್ಯಾಸವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿಯನ್ನು ಝೊಮೇಟೋ ನಿಲ್ಲಿಸಲಿ, ಜಾಹೀರಾತು ಪ್ರಚಾರಕ್ಕೆ ನಾನಾ ರೀತಿಯ ದಾರಿಗಳಿವೆ, ಸಂವಿಧಾನದ ಪುಟ ವಿನ್ಯಾಸವನ್ನು ಫೂಡ್ ಮೆನುವಂತೆ ಬಳಸಿಕೊಳ್ಳುವುದು ಉದ್ಧಟತನವಲ್ಲವೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ವಿವಾದಾತ್ಮಕ ಜಾಹೀರಾತು

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಮಹಿಳೆಯಿಂದ ಗೂಸಾ

ಸಾಲ ಬಾಧೆಯಿಂದ ಬೇಸೆತ್ತು ದಂಪತಿ ಆತ್ಮಹತ್ಯೆಗೆ ಶರಣು

ಹಿಂಸಾರೂಪಕ್ಕೆ ತಿರುಗಿದ ರೈಲ್ವೆ ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿಕೆ

ಡ್ರಗ್​​ ದಂಧೆ ಪ್ರಕರಣ: ಮಹಿಳೆ ಸೇರಿ ಮತ್ತೆ ಮೂವರ ಸೆರೆ

ಕಳ್ಳಭಟ್ಟಿ ಸೇವಿಸಿ ಮತ್ತೆ ಐವರು ಸಾವು: ಮುಂದುವರಿದ ಸಾವಿನ ಸರಣಿ

ಇತ್ತೀಚಿನ ಸುದ್ದಿ