ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ: ಬಿಜೆಪಿ ಕಾರ್ಯಕರ್ತರಿಂದ ಪಕ್ಷದ ಕಚೇರಿ ಲೂಟಿ - Mahanayaka
7:28 AM Thursday 12 - December 2024

ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ: ಬಿಜೆಪಿ ಕಾರ್ಯಕರ್ತರಿಂದ ಪಕ್ಷದ ಕಚೇರಿ ಲೂಟಿ

bjp
31/01/2022

ಮಣಿಪುರ: ಮಣಿಪುರ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಷಯವಾಗಿ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯನ್ನು ಲೂಟಿ ಮಾಡಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರು ಮಣಿಪುರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ವಿರುದ್ಧ ಘೋಷಣೆ ಕೂಗಿ, ಸಿಎಂ ಎನ್ ಬಿರೇನ್ ಸಿಂಗ್ ಹಾಗೂ ರಾಜ್ಯ ವಿಭಾಗದ ಅಧ್ಯಕ್ಷೆ ಶಾರದಾ ದೇವಿ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿಗಳನ್ನು, ಧ್ವಜವನ್ನು ದಹಿಸಿದ್ದಾರೆ.ಕಾರ್ಯಕರ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರಿಗೆ ಟಿಕೆಟ್ ನೀಡುವುದಕ್ಕಾಗಿ ಹಲವು ಮೂಲ ಬಿಜೆಪಿಗರಿಗೆ, ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಕೆಲವು ಬಿಜೆಪಿ ನಾಯಕರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾಳೆ ಖಾಸಗೀಕರಣ ನೀತಿ ವಿರೋಧಿಸಿ ವಿದ್ಯುತ್‌ ನೌಕರರು ದೇಶವ್ಯಾಪಿ ಪ್ರತಿಭಟನೆ

ಭಾರೀ ಮಳೆಗೆ ಬ್ರೆಜಿಲ್ ತತ್ತರ: ಭೂಕುಸಿತಕ್ಕೆ ಕನಿಷ್ಠ 18 ಸಾವು

ಏಪ್ರಿಲ್‌ ಒಳಗೆ ತಾ.ಪಂ., ಜಿ.ಪಂ. ಚುನಾವಣೆ: ಸಚಿವ ಈಶ್ವರಪ್ಪ

ಮುಂದಿನ ಮುಖ್ಯಮಂತ್ರಿ ಯು.ಟಿ.ಖಾದರ್: ವಿಪಕ್ಷ ಉಪನಾಯಕನಾಗುತ್ತಿದ್ದಂತೆಯೇ ಹೊಸ ಚರ್ಚೆ

ಹ್ಯಾಂಡ್‌ ಬಾಲ್‌ ಕೋಚ್‌ ಮಾದಪ್ಪ ಆತ್ಮಹತ್ಯೆ

 

ಇತ್ತೀಚಿನ ಸುದ್ದಿ