ಎರಡು ತಂಡಗಳ ನಡುವೆ ಗಲಾಟೆ: ಮಾರಾಕಾಸ್ತ್ರದೊಂದಿಗೆ ಬಂದ ಯುವಕ - Mahanayaka
9:24 PM Friday 20 - September 2024

ಎರಡು ತಂಡಗಳ ನಡುವೆ ಗಲಾಟೆ: ಮಾರಾಕಾಸ್ತ್ರದೊಂದಿಗೆ ಬಂದ ಯುವಕ

mangalore
02/02/2022

ಮಂಗಳೂರು: ನಗರದ ಬಲ್ಲಾಳ್ ಭಾಗ್ ಬಳಿ ಇರುವ ಖಾಸಗಿ ಕಾಲೇಜಿನ ಬಳಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಒಂದು ತಂಡದಲ್ಲಿದ್ದ ವ್ಯಕ್ತಿ ಮಾರಾಕಾಸ್ತ್ರಗಳೊಂದಿಗೆ ಬಂದಿರುವ ವಿಡಿಯೋ ವೈರಲ್ ಆಗಿದೆ‌.

ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ದ್ವಿಚಕ್ರ ವಾಹನ ಕಾಲೇಜು ಇರುವ ಕಾಲನಿಯ ವ್ಯಕ್ತಿಗೆ ಸ್ಪರ್ಶಿಸಿದ್ದು, ಈ ವಿಚಾರದಲ್ಲಿ ಸ್ಥಳದಲ್ಲಿ ವಾಗ್ವಾದ ನಡೆದಿತ್ತು. ಇದೇ ವಿಚಾರದಲ್ಲಿ ಗಲಾಟೆ ನಡೆದು ಹೊಡೆದಾಟದ ಹಂತದವರೆಗೆ ತಲುಪಿತ್ತು. ಘಟನೆ ಬಳಿಕ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್​​ಗೆ ಹೊರಟು ಹೋಗಿದ್ದರು. ಸಂಜೆ ವೇಳೆಗೆ ಯುವಕರ ತಂಡ ಮತ್ತೆ ಇಲ್ಲಿಗೆ ಬಂದು ದಾಂಧಲೆ ಎಬ್ಬಿಸಿದೆ.

ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮಾರಕಾಸ್ತ್ರಗಳನ್ನು ಹಿಡಿದಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫೆ.7ರಿಂದ ಬಜೆಟ್‌ ಪೂರ್ವಭಾವಿ ಸಿದ್ಧತೆ: ಸಿಎಂ ಬಸವರಾಜ ಬೊಮ್ಮಾಯಿ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

ರಾಜ್ಯ ಸರ್ಕಾರ ಮಲಗಿ ಬಿಟ್ಟಿದೆ: ಮಾಜಿ ಸಚಿವ ಸಂತೋಷ್ ಲಾಡ್

ಕಾರು-ಟ್ರಕ್ ನಡುವೆ ಭೀಕರ ಅಪಘಾತ: ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ಹಾಲಿಗೆ ರಾಸಾಯನಿಕ ಮಿಶ್ರಣ ಪ್ರಕರಣ: ನಾಲ್ವರು ಆರೋಪಿಗಳ ಸೆರೆ

 

ಇತ್ತೀಚಿನ ಸುದ್ದಿ