ನರೇಂದ್ರ ಮೋದಿ ಕಾಲದಲ್ಲಿ ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ: ಸಿದ್ದರಾಮಯ್ಯ - Mahanayaka
4:45 PM Wednesday 5 - February 2025

ನರೇಂದ್ರ ಮೋದಿ ಕಾಲದಲ್ಲಿ ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ: ಸಿದ್ದರಾಮಯ್ಯ

siddaramaiha
02/02/2022

ಮೈಸೂರು: ನಾನು ಬಜೆಟ್ ಮೇಲೆ ನಿರೀಕ್ಷೆ ಇಟ್ಟಿರಲಿಲ್ಲ. ಆದರೆ, ರೈತರು, ಮಹಿಳೆಯರು, ಯುವಕರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು. ಅವರ ನಿರೀಕ್ಷೆ ಈಡೇರಿಲ್ಲ. ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಯಾವ ನಿರೀಕ್ಷೆ ಈಡೇರಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಎಚ್.ಡಿ ಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವರ್ಷದ ಅವಧಿಯಲ್ಲಿ‌ ಬಿಜೆಪಿ 93ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶ ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದರು.

ಕೃಷಿ, ಶಿಕ್ಷಣ, ನಿರುದ್ಯೋಗಕ್ಕೆ ಒತ್ತು ಕೊಡಬೇಕಿತ್ತು. ಅದ್ಯಾವುದೂ ಇಲ್ಲಿ ಆಗಿಲ್ಲ. ಇವತ್ತು ನಿರುದ್ಯೋಗ ಬೆಳೆಯುತ್ತಿದೆ‌. ಸಣ್ಣ, ಮಧ್ಯಮ ಕೈಗಾರಿಕಾ ಮುಚ್ಚುತ್ತಿವೆ. 62 ಪರ್ಸೆಂಟ್ ನಿರುದ್ಯೋಗ ಹೆಚ್ಚಾಗಿದೆ‌. ಈ ಬಜೆಟ್ ಜನರ ನಿರೀಕ್ಷೆಗೆ ಸ್ಪಂದಿಸುವ ಬಜೆಟ್ ಅಲ್ಲ. ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯ ಬಜೆಟ್ ಅಲ್ಲ.

ಇದು ದೇಶವನ್ನು ವಿನಾಶ ಮಾಡುವ ಬಜೆಟ್. ಸಬ್ ಕ ಸಾಥ್ ಸಬ್ ಕಾ ವಿಶ್ವಾಸ್ ಅಂತಾ ನರೇಂದ್ರ ಮೋದಿ ಅಂತಾರೆ ಇದು ಸಬ್ ಕಾ ವಿನಾಶ್ ಬಜೆಟ್. ಈ ಬಜೆಟ್‌ನಲ್ಲಿ ಕರ್ನಾಟಕ ಜನರ ನಿರೀಕ್ಷೆ ಹಸಿಯಾಗಿ. ಗೋವಾ,ಯುಪಿ, ಮಣಿಪುರ್ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆ ಇದೆ‌. ಆ ರಾಜ್ಯಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು ಅದು ಆಗಿಲ್ಲ ಎಂದು ಅವರು ಈ ಬಾರಿಯ ಬಜೆಟ್​ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಾಲಿಗೆ ರಾಸಾಯನಿಕ ಮಿಶ್ರಣ ಪ್ರಕರಣ: ನಾಲ್ವರು ಆರೋಪಿಗಳ ಸೆರೆ

ಸಂವಿಧಾನ ಪುನಃ ಬರೆಯುವ ಅಗತ್ಯವಿದೆ: ತೆಲಂಗಾಣ ಸಿಎಂ ಕೆ.ಸಿ.ಆರ್. ವಿವಾದಾತ್ಮಕ ಹೇಳಿಕೆ

ಬೆಡ್ ​ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್​ ದಂಪತಿ ಜಗಳ

ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ

ಬಜೆಟ್​ನಲ್ಲಿ ‘ಬಡವರು’ ಪದ ಉಲ್ಲೇಖ: ದೇಶದಲ್ಲಿ ಬಡವರಿದ್ದಾರೆಂಬುದನ್ನ ನೆನಪಿಸಿದ ಸಚಿವರಿಗೆ ಧನ್ಯ; ಚಿದಂಬರಂ

 

ಇತ್ತೀಚಿನ ಸುದ್ದಿ