ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ 7 ಮಂದಿಯ ಸೆರೆ
ಹುಬ್ಬಳ್ಳಿ: ಐಷಾರಾಮಿ ಕಾರುಗಳನ್ನು ಮಂಗ ಮಾಯ ಮಾಡುತ್ತಿದ್ದ 7 ಜನರ ಗ್ಯಾಂಗ್ ನ್ನು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರ ತಂಡ ಬಂಧಿಸಿದ್ದಾರೆ.
7 ಮಂದಿ ಕುಖ್ಯಾತ ಕಾರು ವಂಚಕರು ಕರ್ನಾಟಕ ರಾಜ್ಯಾದ್ಯಂತ ಬಾಡಿಗೆಗೆ ಎಂದು ಕಾರುಗಳನ್ನು ಪಡೆದುಕೊಂಡು, ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಮಂಗಳೂರಿನಿಂದ ಬಾಡಿಗೆಗೆ ಎಂದು ಪ್ರೀಮಿಯಂ ಕಾರುಗಳನ್ನು ಪಡೆದು ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಇವರು, ಇಲ್ಲಿಗೆ ಬಂದ ನಂತರ ಆ ಎಲ್ಲಾ ಕಾರುಗಳಿಗೆ ನಕಲಿ ದಾಖಲೆ ತಯಾರಿಸಿ ಕಡಿಮೆ ಹಣಕ್ಕೆ ಅಡವಿಟ್ಟು ಹಣ ಪಡೆಯುತ್ತಿದ್ದರು. ಹೀಗೆ ಮೋಸದಿಂದ ನಂಬಿಸಿ ಕಾರಗಳನ್ನು ಅಡವಿಟ್ಟು ಹಣ ತಗೆದುಕೊಂಡು ಪರಾರಿಯಾಗುತ್ತಿದ್ದರು.
ಕೆಲವು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ತಮ್ಮ ದಂಧೆಯಲ್ಲಿ ತೊಡಗಿದ್ದರು. ಹುಬ್ಬಳ್ಳಿಯ ಓರ್ವನ ಬಳಿ ಇವರು ಕಾರು ಅಡವಿಟ್ಟು ಹಣ ಪಡೆದಿದ್ದ ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಗಳಿಂದ 12 ವಿವಿಧ ಕಂಪೆನಿಗಳ ಕಾರು, 1 ಬೈಕ್ ಹಾಗೂ 22,7000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ನಲ್ಲೇ ತಡೆದ ಪ್ರಾಂಶುಪಾಲರು
ಹುಲ್ಲು ತರಲು ಹೋಗಿದ್ದ ವೇಳೆ ಕಾಡಾನೆ ದಾಳಿ: ವ್ಯಕ್ತಿಯ ದಾರುಣ ಸಾವು
ಹಾವನ್ನು ರಕ್ಷಿಸಲು ಹೋಗಿ ನಾಲೆಗೆ ಬಿದ್ದ ಕಾರು: ಮಹಿಳೆಯ ದಾರುಣ ಸಾವು
3 ವರ್ಷದ ಮಗುವನ್ನು ಕರಡಿ ಬೋನಿಗೆ ಎಸೆದ ತಾಯಿ: ಸಿಸಿ ಕ್ಯಾಮರದಲ್ಲಿ ಭಯಾನಕ ದೃಶ್ಯ ಸೆರೆ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ