ರಾಹುಲ್ ಗಾಂಧಿ ಲೂಧಿಯಾನ ರ‍್ಯಾಲಿಯಲ್ಲಿ ಭದ್ರತಾ ಲೋಪ!
ಪಂಜಾಬ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲೂಧಿಯಾನ ರ‍್ಯಾಲಿಯಲ್ಲಿ ಪಂಜಾಬ್‌ನಲ್ಲಿ ಭದ್ರತಾ ಲೋಪವಾಗಿದೆ.
ಪಂಜಾಬ್‌ನಲ್ಲಿ ರಾಹುಲ್ ಗಾಂಧಿಯವರಿಗೆ ಉಂಟಾದ ಭದ್ರತೆಯ ಲೋಪದಿಂದ ಭದ್ರತಾ ಸಂಸ್ಥೆಗಳು ಸಂಕಷ್ಟಕ್ಕೆ ಈಡಾಗಿವೆ. ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ರಾಹುಲ್ ಲೂಧಿಯಾನಕ್ಕೆ ತೆರಳಿದ್ದರು.
ಹಲ್ವಾರದಿಂದ ಲೂಧಿಯಾನದ ಹಯಾತ್ ರೀಜೆನ್ಸಿಗೆ ತೆರಳುವ ವೇಳೆ ಕಾರು ಹರ್ಷಿಲಾ ರೆಸಾರ್ಟ್ ಬಳಿ ಬಂದಿದೆ. ಆಗ ರಾಹುಲ್ ಗಾಂಧಿ ಅವರು ಕಾರಿನ ಕಿಟಿಕಿಯ ಬಾಗಿಲು ತೆರೆದು ಶುಭಾಶಯಗಳನ್ನು ಸ್ವೀಕರಿಸುತ್ತಿದ್ದರು. ಆ ನಡುವೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿನತ್ತ ಯುವಕನೊಬ್ಬ ಬಾವುಟ ಎಸೆದಿದ್ದಾನೆ.
ಇದಾದ ಬಳಿಕ ರಾಹುಲ್ ಗಾಂಧಿ ಕಾರಿನ ಗಾಜುಗಳನ್ನು ಮುಚ್ಚಿದ್ದಾರೆ. ಘಟನೆಯ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಖಡ್ ಕಾರು ಚಾಲನೆ ಮಾಡುತ್ತಿದ್ದರು, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಮತ್ತು ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಹಿಂದೆ ಕುಳಿತಿದ್ದರು.
ಘಟನೆಯ ನಂತರ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಎಲ್ಲ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಧ್ವಜ ಎಸೆದ ಯುವಕ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್ ಎಸ್ ಯುಐ) ಕಾರ್ಯಕರ್ತನಾಗಿದ್ದು, ಸಿಟ್ಟಿನಿಂದ ರಾಹುಲ್ ಗಾಂಧಿ ಕಡೆಗೆ ಧ್ವಜ ಎಸೆದಿದ್ದಾನೆ ಎನ್ನಲಾಗಿದೆ. ಈತ ಜಮ್ಮು ಕಾಶ್ಮೀರದ ನಿವಾಸಿ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮೃತ ಗುಬ್ಬಚ್ಚಿಗೆ ತಿಥಿ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು
ಭಾರಿ ಹಿಮಪಾತ: 7 ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿರುವ ಶಂಕೆ
ಕೇವಲ 900 ರೂ. ಆಸೆಗೆ ತಂದೆಯನ್ನೇ ಕೊಲೆ ಮಾಡಿದ ಪುತ್ರ
ತ್ರಿಪುರಾ ಬಿಜೆಪಿಗೆ ಇಬ್ಬರು ಶಾಸಕರು ರಾಜೀನಾಮೆ
ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್ ನಲ್ಲೇ ಹೃದಯಾಘಾತದಿಂದ ಸಾವು