ತ್ರಿಪುರಾ ಬಿಜೆಪಿಗೆ ಇಬ್ಬರು ಶಾಸಕರು ರಾಜೀನಾಮೆ
ಅಗರ್ತಲಾ: ಬಿಜೆಪಿ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಸಾಹಾ ಅವರು ತ್ರಿಪುರಾ ವಿಧಾನಸಭೆಗೆ ಸೋಮವಾರ ರಾಜೀನಾಮೆ ನೀಡಿದ್ದು, ತಮ್ಮ ಪಕ್ಷದ ಸದಸ್ಯತ್ವವನ್ನೂ ತ್ಯಜಿಸಿದ್ದಾರೆ.
ರಾಯ್ ಬರ್ಮನ್ ಮತ್ತು ಸಾಹಾ ಅವರು ಸ್ಪೀಕರ್ ರತನ್ ಚಕ್ರವರ್ತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.
ಇಬ್ಬರು ಶಾಸಕರು ಕಾಂಗ್ರೆಸ್ ಸೇರಬಹುದು ಎಂಬ ಊಹಾ ಪೋಹಗಳ ನಡುವೆ ಇಬ್ಬರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ತಮ್ಮ ಮುಂದಿನ ನಡೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮಂಗಳವಾರ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನಾವು ಫೆ. 12 ರಂದು ತ್ರಿಪುರಾಕ್ಕೆ ಹಿಂದಿರುಗುತ್ತೇವೆ. ನಾವು ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರಿಗೆ ಪತ್ರವನ್ನು ಕಳುಹಿಸಿದ್ದೇವೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಸಾಹಾ ಹೇಳಿದರು. ಇಬ್ಬರು ಶಾಸಕರ ರಾಜೀನಾಮೆಯಿಂದ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 33ಕ್ಕೆ ಕುಸಿದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್ ನಲ್ಲೇ ಹೃದಯಾಘಾತದಿಂದ ಸಾವು
ಹಿಜಾಬ್-ಕೇಸರಿ ಪೈಟ್ ನಡುವೆ ಎಂಟ್ರಿಯಾದ ನೀಲಿ: ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ಕಲಾವಿದೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸಿದ ಆರ್ಕೇಸ್ಟ್ರಾ ಮಾಲಕ: ದೂರು ದಾಖಲು