ನದಿಯಗೆ ಕೈ ತೊಳೆಯಲು ತೆರಳಿದ ಯುವಕ ಮೊಸಳೆ ದಾಳಿಗೆ ಬಲಿ
ಕಾರವಾರ: ಕಾಳಿ ನದಿಯಲ್ಲಿ ಕೈ ತೊಳೆಯಲು ಹೊದ ಯುವಕನನ್ನು ಮೊಸಳೆ ಎಳೆದೊಯ್ದ ಘಟನೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
ಆರ್ಷದ್ ಖಾನ್ (22) ಮೃತನಾಗಿದ್ದಾನೆ. ದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಯುವಕನನ್ನು ಮೊಸಳೆ ಹೊತ್ತೊಯ್ದ ಘಟನೆ ಇಂದು ರಾತ್ರಿ ನಡೆದಿದೆ.
ಮೊಸಳೆ ದಾಳಿಗೆ ಬಲಿಯಾದ ಯುವಕನಾಗಿದ್ದು ದಿನನಿತ್ಯದ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋಗಿದ್ದ. ಈ ವೇಳೆ ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ಆತನನ್ನು ಎಳೆದೊಯ್ದಿದೆ. ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳದಿಂದ ಯುವಕನ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ ವಿದ್ಯಾರ್ಥಿಗಳು!
ಶಾಲಾ ಬಾಲಕಿಗೆ ಆನ್‍ಲೈನ್ ನಲ್ಲಿ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
ಬಿಎಸ್ ಪಿ ವರಿಷ್ಠೆ ಮಾಯಾವತಿಯಿಂದ ಪಂಜಾಬ್ ನಲ್ಲಿ ಚುನಾವಣಾ ರ‍್ಯಾಲಿ
ಮಹಾಭಾರತ ಧಾರಾವಾಹಿಯ ‘ಭೀಮ’ ಪ್ರವೀಣ್ ಕುಮಾರ್ ಸೋಬ್ತಿ ನಿಧನ