ಐದು ವರ್ಷದ ಬಾಲಕಿಯನ್ನು ತುಳಿದು ಕೊಂದ ಕಾಡಾನೆ
ತ್ರಿಶ್ಯೂರ್: ಐದು ವರ್ಷದ ಬಾಲಕಿಯನ್ನು ಕಾಡಾನೆಯೊಂದು ತಿಳಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕೇರಳದ ಅತಿರಪಿಲ್ಲಿ ಕನ್ನಂಕುಝಿಯಲ್ಲಿ ನಡೆದಿದೆ.
ಕೇರಳದ ಮಾಲಾ ಎಂಬಲ್ಲಿ ಅಜ್ಜಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ತಂದೆ ತಾಯಿ ಹಾಗೂ ಅಜ್ಜಿಯ ಜೊತೆಗೆ ವಾಪಸ್ ಬರುತ್ತಿದ್ದ ವೇಳೆ ಏಕಾಏಕಿ ಒಂಟಿ ಸಲಗವೊಂದು ದಾಳಿ ನಡೆಸಿದ್ದು, ಬಾಲಕಿಯ ತಲೆಗೆ ತುಳಿದು ಹತ್ಯೆ ಮಾಡಿದೆ ಎಂದು ಹೇಳಲಾಗಿದೆ.
ನಿಖಿಲ್ ಎಂಬವರ ಐದು ಪುತ್ರಿ ಅಗ್ನಿಮಿಯಾ ಮೃತಪಟ್ಟ ಬಾಲಕಿಯಾಗಿದ್ದು, ಆನೆಯ ದಾಳಿಯಿಂದ ಬಾಲಕಿಯ ತಂದೆ ಹಾಗೂ ಅಜ್ಜನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
5 ಲಕ್ಷ ಪರಿಹಾರ ಘೋಷಣೆ:
ಇನ್ನೂ ಕಾಡಾನೆಗೆ ಬಾಲಕಿ ಬಲಿತಯಾದ ಹಿನ್ನೆಲೆಯಲ್ಲಿ ಮಗುವಿನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಗೃಹ ಖಾತೆ ರಾಜ್ಯ ಸಚಿವ ಎ.ಕೆ.ಶಶೀಂದ್ರ ಘೋಷಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಲೂಧಿಯಾನ ರ‍್ಯಾಲಿಯಲ್ಲಿ ಭದ್ರತಾ ಲೋಪ!
ಮೃತ ಗುಬ್ಬಚ್ಚಿಗೆ ತಿಥಿ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು
ಭಾರಿ ಹಿಮಪಾತ: 7 ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿರುವ ಶಂಕೆ