ಜೈ ಶ್ರೀರಾಮ್ ಘೋಷಣೆಗೆ, ಅಲ್ಲಾಹು ಅಕ್ಬರ್ ಎಂದು ಪ್ರತಿರೋಧ ಒಡ್ಡಿದ ವಿದ್ಯಾರ್ಥಿನಿ: ವಿಡಿಯೋ ವೈರಲ್
ಮಂಡ್ಯ: ನಗರದ ಪಿಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯನ್ನು ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ಬೆದರಿಸಲು ಯತ್ನಿಸಿದ್ದು, ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ವಿದ್ಯಾರ್ಥಿ ಬೆದರದೇ, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿಡಿಯೋ ವೈರಲ್ ಆಗಿದೆ.
ವಿದ್ಯಾರ್ಥಿನಿ ತನ್ನಷ್ಟಕ್ಕೆ ತಾನು ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದ್ದಳು. ಆಕೆ ತನ್ನ ತರಗತಿಗೆ ಹೋಗುತ್ತಿದ್ದ ವೇಳೆ ಕೆಣಕಿದ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪು, ಆಕೆಯನ್ನು ಬೆನ್ನಟ್ಟಿ ಬರುವಂತೆ, ಬಂದು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಈ ವೇಳೆ ಅವರಿಗೆ ಒಬ್ಬಂಟಿಯಾಗಿ ಎದುರು ನಿಂತ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿರುವ ಘಟನೆ ಮಂಗಳವಾರ ನಡೆದಿದೆ.
ಇನ್ನೂ ಕೇಸರಿಶಾಲು ಧರಿಸಿ ವಿವಾದ ಸೃಷ್ಟಿಸಲು ಯತ್ನಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ಕಾಲೇಜು ಆಡಳಿತ ಮಂಡಳಿ ನಿರಾಕರಿಸಿತು. ವಿದ್ಯಾರ್ಥಿನಿಯರು ಹಿಜಾಬ್ ತೆಗೆದರೆ ನಾವು ಕೇಸರಿ ಶಾಲು ತೆಗೆಯುತ್ತೇವೆ ಎಂದು ವಿದ್ಯಾರ್ಥಿಗಳು ಪ್ರತಿವಾದ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಮವಸ್ತ್ರ ವಿವಾದ: ಶಾಸಕರ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು!
ಸಮವಸ್ತ್ರ ವಿವಾದ: ಮುಂದಿನ 3 ದಿನಗಳ ಕಾಲ ಪ್ರೌಢ ಶಾಲಾ ಕಾಲೇಜುಗಳಿಗೆ ರಜೆ
ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ: ಮದ್ರಸ ಅಧ್ಯಾಪಕ ಅರೆಸ್ಟ್