ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣ: ಹಂತಕಿಯ ಬಂಧನ
ಮಂಡ್ಯ: ಮಂಡ್ಯದಲ್ಲಿ ನಾಲ್ವರು ಮಕ್ಕಳು ಮತ್ತು ಮಹಿಳೆ ಸೇರಿ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್. ಎಸ್. ಗ್ರಾಮದಲ್ಲಿ ಐವರನ್ನು ಹತ್ಯೆಗೈದಿರುವುದು ದೊಡ್ಡಪ್ಪನ ಮಗಳಿಂದಲೇ ಎಂದು ತಿಳಿದುಬಂದಿದೆ.
ತಂಗಿಯ ಗಂಡನ ಮೇಲಿನ ವ್ಯಾಮೋಹಕ್ಕೆ ಆಕೆಯನ್ನು ಕೊಲೆ ಮಾಡಿದ್ದಲ್ಲದೆ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಉಳಿದ ನಾಲ್ವರು ಮಕ್ಕಳನ್ನು ಪಾತಕಿ ಹತ್ಯೆಗೈದಿದ್ದಾಳೆ ಎನ್ನಲಾಗಿದೆ.
ಲಕ್ಷ್ಮಿ (30) ಆರೋಪಿಯಾಗಿದ್ದು, ಈಕೆ ಕೊಲೆಯಾದ ಲಕ್ಷ್ಮಿ (26) ಗಂಡ ಗಂಗಾರಾಮ್ ಜೊತೆ ವಿವಾಹೇತರ ಸಂಬಂಧವಿತ್ತು. ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರೂ ತಂಗಿಯ ಗಂಡನನ್ನು ಪ್ರೀತಿಸುತ್ತಿದ್ದಳು. ಹೆಂಡತಿಗೆ ಈ ವಿಚಾರ ತಿಳಿದ ಬಳಿಕ ಗಂಗಾರಾಮ್ ಅಕ್ರಮ ಸಂಬಂಧ ಬಿಟ್ಪಿದ್ದ. ಆದರೆ, ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಗಂಗಾರಾಮ್ನನ್ನು ಆರೋಪಿ ಪೀಡಿಸುತ್ತಿದ್ದಳು.
ಇದೀಗ ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಗಂಗಾರಾಮ್ ವ್ಯಾಪಾರಕ್ಕೆ ತೆರಳಿದ ಸಂದರ್ಭದಲ್ಲಿ ನಿನ್ನ ಜೊತೆ ಮಾತನಾಡಬೇಕೆಂದು ತಂಗಿಯ ಮನೆಗೆ ರಾತ್ರಿ 9 ಗಂಟೆಗೆ ಬಂದಿದ್ದ ಹಂತಕಿ, ಮಧ್ಯರಾತ್ರಿ ಭೀಕರ ಕೊಲೆ ಮಾಡಿದ್ದಾಳೆ. ತಂಗಿ ಹಾಗೂ ಮಲಗಿದ್ದ ನಾಲ್ವರು ಮಕ್ಕಳನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದಿದ್ದಾಳೆ.
ಘಟನೆ ಸಂಬಂಧ ಕೆ.ಆರ್.ಎಸ್ ಠಾಣೆ ಪೊಲೀಸರು ಹಂತಕಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಒಂದೇ ಕುಟುಂಬದ ಐವರ ಬರ್ಬರ ಹತ್ಯೆ: ಮಕ್ಕಳು ಎಂದೂ ನೋಡದ ಕೊಚ್ಚಿ ಹಾಕಿದರು!
ಸಮವಸ್ತ್ರ ವಿವಾದ: ಶಾಸಕರ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು!
ಜೈ ಶ್ರೀರಾಮ್ ಘೋಷಣೆಗೆ, ಅಲ್ಲಾಹು ಅಕ್ಬರ್ ಎಂದು ಪ್ರತಿರೋಧ ಒಡ್ಡಿದ ವಿದ್ಯಾರ್ಥಿನಿ: ವಿಡಿಯೋ ವೈರಲ್
ಪ್ರತಿಭಟನೆಯ ಬಳಿಕ ಕೇಸರಿ ಪೇಟ ರಾಶಿ ಹಾಕುತ್ತಿರುವ ದೃಶ್ಯ ವೈರಲ್!