ಅಭಿವೃದ್ಧಿಯ ಹರಿಕಾರ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ನೀಡಿ: ಯುವ ಬಿಜೆಪಿ ಮುಖಂಡ ಲಿಖಿತ್ ಗೌಡ ಒತ್ತಾಯ - Mahanayaka
10:55 PM Wednesday 11 - December 2024

ಅಭಿವೃದ್ಧಿಯ ಹರಿಕಾರ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ನೀಡಿ: ಯುವ ಬಿಜೆಪಿ ಮುಖಂಡ ಲಿಖಿತ್ ಗೌಡ ಒತ್ತಾಯ

preetham gowda
10/02/2022

ಹಾಸನ: ಸಚಿವ ಸಂಪುಟ ವಿಸ್ತರಣೆ ಸದ್ದು ಕೇಳಿಸುತ್ತಿದ್ದಂತೆಯೇ, ಶಾಸಕ ಪ್ರೀತಂ ಗೌಡ ಅವರ ಹೆಸರು ಕೇಳಿ ಬಂದಿದ್ದು, ಹಾಸನದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳ ಮೂಲಕ ಗಮನ ಸೆಳೆಯುತ್ತಿರುವ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ದೊರಕ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಪ್ರೀತಂ ಗೌಡ ಅವರು ಜನಸಾಮಾನ್ಯರ ಕೈಗೆಟಕುವ ಶಾಸಕರಾಗಿದ್ದಾರೆ. ಜನರ ಯಾವುದೇ ಸಮಸ್ಯೆಗಳಿಗೂ ತಕ್ಷಣವೇ ಅವರು ಸ್ಪಂದಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕರೆ, ಕೇವಲ ಹಾಸನ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹಾಸನ ನಗರ ಲಿಖಿತ್ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಪ್ರೀತಂ ಗೌಡ ಅವರು, ಹಾಸನದ ಅಭಿವೃದ್ಧಿಗಾಗಿ ದಿನನಿತ್ಯ ಶ್ರಮಿಸುತ್ತಿದ್ದಾರೆ. ನಗರದಲ್ಲಿ ಬೀದಿ ವ್ಯಾಪಾರಸ್ಥರಿಗೆ ಸಹಕಾರಿಯಾಗುವಂತೆ ತಮ್ಮ ಶಾಸಕರ ಅನುದಾನದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಿದ್ದಾರೆ. ಆಟೋ ಚಾಲಕರಿಗೆ ನೆರವಾಗುವ ನಿಟ್ಟಿನಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣ ಮಾಡಿದ್ದಾರೆ ಎಂದು ಅವರು ಹೇಳಿದರು.

ಈ ಹಿಂದೆ ಹಾಸನದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಪ್ರೀತಂ ಗೌಡ ಅವರು ಬಹಳ ಮುತುವರ್ಜಿ ವಹಿಸಿ ಫುಡ್ ಕೋರ್ಟ್ ನಿರ್ಮಾಣ ಮಾಡಿದ್ದರು. ಆಟೋ ಚಾಲಕರಿಗೆ ಸರಿಯಾದ ಆಟೋ ಸ್ಟ್ಯಾಂಡ್ ಇರಲಿಲ್ಲ. ಆಟೋ ಚಾಲಕರು ಬಿರು ಬಿಸಿಲಿನಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸುವಂತಹ ಸ್ಥಿತಿಗಳಿದ್ದವು. ಈ ಸಮಸ್ಯೆಗಳನ್ನು ಮನಗಂಡ ಪ್ರೀತಂ ಗೌಡ ಅವರು ಆಟೋ ಚಾಲಕರಿಗೆ ಆಟೋ ಸ್ಟ್ಯಾಂಡ್ ಮಾಡಿಸಿಕೊಟ್ಟಿದ್ದಾರೆ ಎಂದು ಲಿಖಿತ್ ಹೇಳಿದರು.

ಹಾಸನದಲ್ಲಿ ಪ್ರೀತಂ ಗೌಡ ನೇತೃತ್ವದಲ್ಲಿ ಹಲವಾರು ಕೆಲಸಗಳು ನಡೆಯುತ್ತಿವೆ. ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯಾರನ್ನೂ ಹಸಿವಿನಲ್ಲಿಡಬಾರದು ಎಂಬ ಧ್ಯೇಯದೊಂದಿಗೆ ಹಸಿದವರಿಗೆ  ಅನ್ನ ದೊರಕಿಸುವ ಕೆಲಸವನ್ನು ಪ್ರೀತಂ ಗೌಡ ಅವರು ಮಾಡಿದ್ದರು ಎಂದು ಲಿಖಿತ್ ಗೌಡ ತಿಳಿಸಿದರು.

ಸಾರ್ವಜನಿಕ ಸೇವೆ ಮತ್ತು ಪಕ್ಷ ನಿಷ್ಠೆಗೆ ಇನ್ನೊಂದು ಹೆಸರಿದ್ದರೆ ಅದು ಪ್ರೀತಂ ಗೌಡ ಮಾತ್ರ. ಪಕ್ಷದ ಸ್ವಾಭಿಮಾನದ ಪ್ರಶ್ನೆಗಳು ಬಂದಾಗ ಯಾವುದೇ ಮುಲಾಜಿ ಇಲ್ಲದೇ ಅವರು ಧ್ವನಿ ಎತ್ತಿದವರು.  ಇದರ ಜೊತೆಗೆ ಸಹಾಯ, ಸಹನೆ, ಪ್ರೀತಿ, ವಿಶ್ವಾಸ, ಗುಣ,  ನಂಬಿಕೆ, ಗೌರವ, ಸಾಧನೆ  ಇದೆಲ್ಲದಕ್ಕೂ ಸಮನಾದ ಪದ ಎಂಬಂತೆ ತಮ್ಮ ನಡೆನುಡಿಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಹಾಸನ ಹಾಗೂ ಇಡೀ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಪ್ರೀತಂ ಗೌಡ ಅವರು ಯುವ ಬಿಜೆಪಿ ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ. ಸಚಿವ ಸ್ಥಾನ ಪಡೆಯುವ ಎಲ್ಲ ಅರ್ಹತೆ, ಸಾಮಾಜಿಕ ಬದ್ಧತೆ ಅವರಿಗಿದೆ. ಅವರನ್ನು ಸಚಿವಸ್ಥಾನಕ್ಕೆ ಪರಿಗಣಿಸಬೇಕು ಎಂದು ಲಿಖಿತ್ ಗೌಡ ಒತ್ತಾಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಬ್-ಕೇಸರಿ ವಿವಾದ: ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ; ನಟಿ ಖುಷ್ಬೂ

ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ಹಿಂದೂ ವಿದ್ಯಾರ್ಥಿನಿಯವರು ಬುರ್ಖಾ ಧರಿಸಬೇಕಾ?: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ

ಅಕ್ರಮ ಸಂಬಂಧ ಗಂಡನಿಗೆ ಗೊತ್ತಾದ ಹಿನ್ನಲೆ: ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ

ಅಲ್ಲಾಹು ಅಕ್ಬರ್‌’ ಎಂದು ಕೂಗಿದ ಮಂಡ್ಯದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ

ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

 

ಇತ್ತೀಚಿನ ಸುದ್ದಿ