ಬಾವಿಯಲ್ಲಿ ಪಿಯುಸಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ
ತಿರುವನಂತಪುರಂ: ಇಲ್ಲಿನ ಕಟ್ಟುರು ಠಾಣಾ ವ್ಯಾಪ್ತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಜ್ಯೋತಿ ಪ್ರಕಾಶ್ ಮತ್ತು ರಜಿತಾ ದಂಪತಿ ಪುತ್ರಿ ಶಾಂತವನ(19) ಮೃತ ಯುವತಿ. ಈಕೆ ಇರಿಂಜಲಕುಡ ನಿವಾಸಿಯಾಗಿದ್ದು, ಕೊಡುಂಗಲ್ಲೂರಿನ ಕೆಕೆಟಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಳೆ.
ಈಕೆ ಗುರುವಾರ 11.30ರ ಸುಮಾರಿಗೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆ ನಡೆದಾಗ ಶಾಂತವನ ಹೆತ್ತವರು ಮನೆಯಲ್ಲಿ ಇರಲಿಲ್ಲ. ಸ್ಥಳೀಯರು ಬಾವಿಯಲ್ಲಿ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ದೌಡಾಯಿಸಿದ ಪೊಳಿಸರು ಬಾವಿಯಿಂದ ಶಾಂತವನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ತರರಿಸ್ಸೂರ್ ಮೆಡಿಕಲ್ ಕಾಲೇಜಿಗೆ ರವಾನಿಸಿದ್ದಾರೆ
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಕಟ್ಟುರು ಠಾಣಾ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಮವಸ್ತ್ರ ವಿವಾದ: ಹೈಕೋರ್ಟ್ ನಿಂದ ಮಧ್ಯಂತರ ಆದೇಶ
ಹಣಕಾಸಿನ ವಿಚಾರಕ್ಕೆ ಪತಿ, ಮಾವನಿಂದ ಮಹಿಳೆಯ ಕೊಲೆ
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು