ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಬೇಡಿ: ಆರೆಸ್ಸೆಸ್ ಸೂಚನೆ
ನವದೆಹಲಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸ ಬಾರದು ಎಂದು ಕೆಲವು ವಿದ್ಯಾರ್ಥಿಗಳ ಗುಂಪು ಕೇಸರಿ ಧರಿಸಿ ಆಗಮಿಸಿದ ವಿಚಾರ ಇದೀಗ ಹೈಕೋರ್ಟ್ ನಲ್ಲಿದೆ. ಈ ನಡುವೆಯೇ ಶಾಲಾ ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಹೋಗುವುದು ಬೇಡ ಎಂದು ಆರೆಸ್ಸೆಸ್ ಸೂಚನೆ ನೀಡಿರುವುದಾಗಿ ಮಾಧ್ಯಮ ವರದಿಯಾಗಿದೆ.
ಕಾಲೇಜೊಂದರಲ್ಲಿ ನೀಲಿ ಶಾಲು ಧರಿಸಿ, ಕೇಸರಿ ಶಾಲು ಧರಿಸಿದವರ ವಿರುದ್ಧ ಸಂವಿಧಾನ ಪರ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದ ಬೆನ್ನಲ್ಲೇ ಇಂತಹದ್ದೊಂದು ಸೂಚನೆಯನ್ನು ಆರೆಸ್ಸೆಸ್ ನೀಡಿದೆ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ಕೇಸರಿ ಶಾಲು ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ಲಾಭ ಪಡೆದುಕೊಳ್ಳಬಹುದು ಎಂದು ಆರೆಸ್ಸೆಸ್ ಹೇಳಿರುವುದಾಗಿ ಹೇಳಲಾಗಿದೆ.
ಯಾವುದೇ ಕಾರಣಕ್ಕೂ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವುದು ಬೇಡ, ಕಾನೂನು ಸುವ್ಯವಸ್ಥೆ ಕಾಪಾಡ ಬೇಕು. ಹಿಜಾಬ್ ವ್ಯವಸ್ಥೆ ಪ್ರತಿಷ್ಠೆಯ ವಿಷಯ ಮಾಡಬೇಡಿ ಎಂದು ಆರೆಸ್ಸೆಸ್ ಹೇಳಿದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವು, 6 ಮಂದಿ ಗಾಯ
ತಲೆ ಮೇಲೆ ಮರದ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು
ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು
ಸಬ್ ಇನ್ಸ್ ಪೆಕ್ಟರ್ ನ ಕಾರಿನ ಗಾಜು ಒಡೆದು, ಹಣ ಲ್ಯಾಪ್ ಟಾಪ್ ದೋಚಿದ ಕಳ್ಳ!