ಲಿಬಿಯಾ ಪ್ರಧಾನಿಯ ಬೆಂಗಾವಲು ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ
ಲಿಬಿಯಾ: ಲಿಬಿಯಾ ಪ್ರಧಾನಿ ಅಬ್ದುಲ್-ಹಮೀದ್ ದ್ಬೈಬಾ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಲಿಬಿಯಾದ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ರಾಜಧಾನಿ ಟ್ರಿಪೋಲಿಯಲ್ಲಿ ಗುರುವಾರ ಅಪರಿಚಿತ ವಾಹನದಲ್ಲಿದ್ದ ವ್ಯಕ್ತಿಗಳು ಬಂದೂಕುಗಳಿಂದ ಪ್ರಧಾನಮಂತ್ರಿ ಬೆಂಗಾವಲು ಪಡೆಯ ವಾಹನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ಅಬ್ದುಲ್ಮೆನೆಮ್ ಅಲ್-ಅರಬಿ ತಿಳಿಸಿದ್ದಾರೆ.
ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಲ್- ಅರಬಿ ದೃಢಪಡಿಸಿದ್ದು, ಲಿಬಿಯಾದಲ್ಲಿ ರಾಜಕೀಯದಲ್ಲಿ ಪ್ರಕ್ಷುಬ್ಧತೆ ಏರ್ಪಟ್ಟಿದೆ. ಈ ಬೆನ್ನಲ್ಲೇ ಪ್ರಧಾನಿ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಗೃಹ ಸಚಿವಾಲಯವು ಈ ಅಪರಾಧ ಕೃತ್ಯವನ್ನು ಖಂಡಿಸುತ್ತದೆ ಹಾಗೂ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಅಲ್- ಅರಬಿ ಸ್ಪಷ್ಟನೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎಚ್‌ಐವಿ ಹೊಂದಿದ್ದ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ: ಕಾಲುವೆಗೆ ಬಿದ್ದು, 3 ಮಂದಿ ಸಾವು
ಎನ್ ಐಟಿಕೆ ಟೋಲ್‌ಗೇಟ್ ವಿರುದ್ಧ ಕೆಸರು ನೀರಲ್ಲಿ ಕುಳಿತು ವಿನೂತನ ಪ್ರತಿಭಟನೆ
ಜಿ.ಪಂ., ತಾ.ಪಂ. ಚುನಾವಣೆ: ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ: ಸಚಿವ ಈಶ್ವರಪ್ಪ