ಪೊಲೀಸ್ ಇನ್ಸ್​ಪೆಕ್ಟರ್ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ - Mahanayaka
6:24 AM Thursday 12 - December 2024

ಪೊಲೀಸ್ ಇನ್ಸ್​ಪೆಕ್ಟರ್ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

crime news
12/02/2022

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್​ ಮತ್ತು ಅವರ ವಾಹನಕ್ಕೆ ಪೆಟ್ರೋಲ್ ಸುರಿದು ಸುಡಲು ಯತ್ನಿಸಿರುವ ಘಟನೆ ಮುತ್ತುರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ನಾರಾಯಣಸ್ವಾಮಿ‌, ಹರೀಶ್​, ಹಿತೇಶ್, ಅಂಬರಿಶ್ ಸೇರಿ ಐವರು ಈ ಕೃತ್ಯ ಎಸಗಿದ್ದಾರೆ. ಮುತ್ತುರಾಯಸ್ವಾಮಿ ದೇವಸ್ಥಾನ ಬಳಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಗುಂಪು ಕಟ್ಟಿಕೊಂಡು ಬಂದಿದ್ದ ಆರೋಪಿಗಳು, ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದಾರೆ. ಆರೋಪಿಗಳ ಗಲಾಟೆ ಹೆಚ್ಚಾಗುತ್ತಿದ್ದಂತೆ ಕಾಮಗಾರಿ ಮಾಡುತ್ತಿದ್ದ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಇನ್ಸ್​ಪೆಕ್ಟರ್ ಜಗದೀಶ್, ಗಲಾಟೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೂ ಗಲಾಟೆ ನಿಲ್ಲಿಸದ ದುಷ್ಕರ್ಮಿಗಳು, ಇನ್ಸ್​ಪೆಕ್ಟರ್ ಜಗದೀಶ್ ಮತ್ತು ಅವರ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದರು.

ಜೊತೆಗೆ ಪೊಲೀಸ್ ಸಿಬ್ಬಂದಿ ಶಿವರಾಜ್ ಭುಜಕ್ಕೆ ಕಚ್ಚಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಕೋಡಿಗೆಹಳ್ಳಿ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಜಗದೀಶ್ ದೂರು ದಾಖಲಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮನೆ ಬಿಟ್ಟು ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟಕ್ಕೆ ಯತ್ನ

ಮದುವೆ ಆರತಕ್ಷತೆ ವೇಳೆ ಕುಸಿದ ಬಿದ್ದ ವಧುವಿನ ಮೆದುಳು ನಿಷ್ಕಿಯ: ಪೋಷಕರಿಂದ ಅಂಗಾಂಗ ದಾನಕ್ಕೆ ನಿರ್ಧಾರ

ಮದುವೆ ಮಾಡಿಸಿಲ್ಲ ಎಂದು ತಂದೆಯನ್ನೇ ಕೊಂದ ಪಾಪಿ ಮಗ!

ಪಾರ್ಥೀವ ಶರೀರದಂತೆ ಮಲಗಿ ಟೋಲ್ ಗೇಟ್ ಅನ್ಯಾಯ ಪ್ರಶ್ನಿಸಿದ ಆಸಿಫ್ ಆಪತ್ಬಾಂಧವ

ಎಚ್‌ಐವಿ ಹೊಂದಿದ್ದ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಇತ್ತೀಚಿನ ಸುದ್ದಿ