ಸಿಡಿದೆದ್ದ ಸಂವಿಧಾನ ಪರ ಸಂಘಟನೆಗಳು: ಫೆ.19ರಂದು “ವಿಧಾನ ಸೌಧ-ಹೈಕೋರ್ಟ್ ಚಲೋ”ಗೆ ಕರೆ
ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರನ್ನು ತೆರವುಗೊಳಿಸಿ, ಉದ್ಧಟತನ ಮೆರೆದಿದ್ದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಬೃಹತ್ ಪ್ರತಿಭಟನೆಗೆ ಸಂವಿಧಾನ ಪರ ಸಂಘಟನೆಗಳು ಮುಂದಾಗಿದ್ದು, ಕರ್ನಾಟಕ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಫೆಬ್ರವರಿ 19ರಂದು ವಿಧಾನ ಸೌಧ-ಹೈಕೋರ್ಟ್ ಚಲೋಗೆ ಕರೆ ನೀಡಿದೆ.
ಫೆಬ್ರವರಿ 19ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ವಿಧಾನ ಸೌಧ ಚಲೋ-ಹೈಕೋರ್ಟ್ ಚಲೋ ಬೃಹತ್ ಮೆರವಣಿಗೆ ನಡೆಯಲಿದ್ದು, ರಾಜ್ಯದ ಪ್ರಮುಖ ಸಂವಿಧಾನ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.
ಇನ್ನೂ ಫೆ.೧೩ರಂದು ಈ ಸಂಬಂಧ ಕರ್ನಾಟಕದ ಪ್ರಮುಖ 31 ಜಿಲ್ಲೆಗಳ ಸಂವಿಧಾನ ಪರ ಸಂಘಟನೆಗಳು ಏಕತಾ ಸಭೆಯಲ್ಲಿ ಭಾಗವಹಿಸಿದ್ದು, ಬೃಹತ್ ಒಗ್ಗಟ್ಟು ಪ್ರದರ್ಶಿಸಿದೆ. ಈ ಸಭೆಯಲ್ಲಿ ಚಲನ ಚಿತ್ರ ನಟ ಅಹಿಂಸಾ ಚೇತನ್, ಸಾಮಾಜಿಕ ಹೋರಾಟಗಾರರರಾದ ಹರಿರಾಮ್ ಎ., ಆರ್ ಪಿಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಹ.ರಾ.ಮಹೇಶ್ ಸೇರಿದಂತೆ ರಾಜ್ಯದ ಪ್ರಮುಖ ನಾಯರು ಭಾಗಿಯಾಗಿದ್ದರು.
ಮಾಹಿತಿಗಳ ಪ್ರಕಾರ, ರಾಜ್ಯದ ಪ್ರಮುಖ ಸಂವಿಧಾನ ಪರ ಸಂಘಟನೆಗಳು ಈ ವಿಧಾನ ಸೌಧ-ಹೈಕೋರ್ಟ್ ಚಲೋ ಹೋರಾಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದ್ದು, ದೇಶಕ್ಕೆ ಸಂವಿಧಾನ ಬರೆದ, ಡಾ.ಅಂಬೇಡ್ಕರ್ ಅವರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ನ್ಯಾಯಾಧೀಶರೊಬ್ಬರು ರಾಜಾರೋಷವಾಗಿ ಅವಮಾನ ಮಾಡಿದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ತಾಳಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನೊಂದಡೆಯಲ್ಲಿ, ಹುಮ್ನಾಬಾದ್ ನಲ್ಲಿ ಮಲ್ಲಿಕಾರ್ಜುನ ಗೌಡ ವಿರುದ್ಧ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ತೆರಳಿದ ವೇಳೆ ಹೋರಾಟಗಾರರ ಮನವಿ ಸ್ವೀಕರಿಸದೇ ತಹಶೀಲ್ದಾರ್ ಉದ್ಧಟತನ ಮೆರೆದಿದ್ದು, ಈ ವೇಳೆ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದ್ದು, ಹೋರಾಟಗಾರರ ವಿರುದ್ಧವೇ ಕೇಸ್ ದಾಖಲಿಸಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಇದರ ವಿರುದ್ಧವೂ ಪ್ರತಿಭಟನಾಕಾರರು ಧ್ವನಿಯೆತ್ತಲಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಸಕ ಹಾಲಪ್ಪ, ಬೇಳೂರು ಗೋಪಾಲಕೃಷ್ಣರಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ
ಪೊಲೀಸ್ ಇನ್ಸ್ಪೆಕ್ಟರ್ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ
ಮನೆ ಬಿಟ್ಟು ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟಕ್ಕೆ ಯತ್ನ
ಪಾರ್ಥೀವ ಶರೀರದಂತೆ ಮಲಗಿ ಟೋಲ್ ಗೇಟ್ ಅನ್ಯಾಯ ಪ್ರಶ್ನಿಸಿದ ಆಸಿಫ್ ಆಪತ್ಬಾಂಧವ
ಪಾರ್ಥೀವ ಶರೀರದಂತೆ ಮಲಗಿ ಟೋಲ್ ಗೇಟ್ ಅನ್ಯಾಯ ಪ್ರಶ್ನಿಸಿದ ಆಸಿಫ್ ಆಪತ್ಬಾಂಧವ
ಲಿಬಿಯಾ ಪ್ರಧಾನಿಯ ಬೆಂಗಾವಲು ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ