ಹುಟ್ಟಿ 6 ತಿಂಗಳಿಗೇ ಮೃತಪಟ್ಟ ಮಗು: ನೊಂದ ತಾಯಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಹುಟ್ಟಿದ ಮಗು 6 ತಿಂಗಳಿಗೇ ಮೃತಪಟ್ಟಿದ್ದರಿಂದ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಸ್.ಜಿ.ಪಾಳ್ಯದ ತಾವರೆಕೆರೆಯಲ್ಲಿ ನಡೆದಿದ್ದು, ಈ ಆತ್ಮಹತ್ಯೆಯ ಬಗ್ಗೆ ಅನುಮಾನ ಕೂಡ ಸೃಷ್ಟಿಯಾಗಿದೆ.
ಮಂಡ್ಯ ಮೂಲದ ಪಲ್ಲವಿ ಎಂಬವರು ಆತ್ಮಹತ್ಯೆಗೆ ಶರಣಾದವರು ಎಂದು ಹೇಳಲಾಗಿದೆ. ನಾಲ್ಕು ವರ್ಷಗಳ ಹಿಂದೆ ಇವರು ಸಿದ್ದು ಎಂಬಾತನ ಜೊತೆಗೆ ವಿವಾಹವಾಗಿದ್ದರು. ಮೊದಲ ಬಾರಿ ಅವರು ಗರ್ಭಿಣಿಯಾದಾಗ ಗರ್ಭಪಾತವಾಗಿತ್ತು. ಎರಡನೇ ಬಾರಿ ಮಗು ಜನಿಸಿದರೂ ಮಗುವಿನ ಹೃದಯದಲ್ಲಿ ರಂಧ್ರ ಇದ್ದು, ಮಗು ಅನಾರೋಗ್ಯದಿಂದ ಬಳಲುತಿತ್ತು ಎನ್ನಲಾಗಿದೆ.
ಸಿದ್ದು ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದರು. ಮಗುವನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಮಗುವನ್ನು ಉಳಿಸಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಮಲಗಿದ್ದ ಮಗು ಅಲ್ಲಿಯೇ ಮೃತಪಟ್ಟಿತ್ತು. ಈ ನೋವಿನಿಂದ ತಾಯಿ ಪಲ್ಲವಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಡೆತ್ ನೋಟ್ ಕೂಡ ಬರೆದಿದ್ದಾರೆ.
ಪಲ್ಲವಿ ಆತ್ಮಹತ್ಯೆಯ ಬೆನ್ನಲ್ಲೇ, ಪೊಲೀಸರಿಗೆ ಮಾಹಿತಿ ತಿಳಿಸದೇ ಸಿದ್ದು ಮೃತದೇಹವನ್ನು ಊರಿಗೆ ಸಾಗಿಸಲು ಯತ್ನಿಸಿದ್ದು, ಇದರಿಂದಾಗಿ ಮೃತರ ಕುಟುಂಬಸ್ಥರ ಆಕ್ಷೇಪ ವ್ಯಕ್ತಪಡಿಸಿದ್ದು, ಪಲ್ಲವಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದು ಕೊಲೆ ಎನ್ನುವ ಅನುಮಾನ ಇರುವುದಾಗಿ ಸುದ್ದಗುಂಟೆ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಪಲ್ಟಿ: ಹಲವರಿಗೆ ಗಾಯ
ನಾನು ಹಿಜಾಬ್ ಬಗ್ಗೆ ಮಾತನಾಡ್ತೀನಿ: ಡಿ.ಕೆ.ಶಿವಕುಮಾರ್ ಸೂಚನೆ ತಿರಸ್ಕರಿಸಿದ ಜಮೀರ್
ಫೆ. 17ರಂದು ಹಾರಿಹಿತ್ಲು, ರೆಂಜಾಳ ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ