ಕೆಂಪುಕೋಟೆ ಗಲಭೆಯ ಪ್ರಮುಖ ಆರೋಪಿ ಸಿಧು ಅಪಘಾತದಲ್ಲಿ ಸಾವು! - Mahanayaka

ಕೆಂಪುಕೋಟೆ ಗಲಭೆಯ ಪ್ರಮುಖ ಆರೋಪಿ ಸಿಧು ಅಪಘಾತದಲ್ಲಿ ಸಾವು!

deep sidhu
16/02/2022

ಚಂಡೀಗಢ: ಕೆಂಪು ಕೋಟೆಯಲ್ಲಿ ರೈತರ ಧ್ವಜ ಹಾರಿಸಿದ ಗಲಾಟೆಯ ಪ್ರಮುಖ ಆರೋಪಿ ನಟ ದೀಪ್ ಸಿಧು ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ದೆಹಲಿಯಿಂದ  ಮಂಗಳವಾರ ಸ್ಕಾರ್ಫಿಯೋ ಕಾರಿನಲ್ಲಿ ಪಂಜಾಬ್ ಗೆ ತೆರಳುತ್ತಿದ್ದ ವೇಳೆ ವೆಸ್ಟರ್ನ್ ಪೆರಿಪರಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಸಿಘು ಗಡಿಯಲ್ಲಿ ರಾತ್ರಿ 8:30ರ ವೇಳೆಗೆ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಸಿಧುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.

2021ರ ಗಣರಾಜ್ಯೋತ್ಸವದ ವೇಳೆಯಲ್ಲಿ ರೈತರ ಹೋರಾಟದಲ್ಲಿ ಕೆಂಪುಕೋಟೆಯ ಮೇಲೆ ಏಕಾಏಕಿ ತಂಡವೊಂದು ಹತ್ತಿತ್ತು. ಇದು ರೈತರ ಹೋರಾಟದ ಪ್ಲಾನ್ ಆಗಿರಲಿಲ್ಲ ಎಂದು ರೈತರು ಕೂಡ ಹೇಳಿದ್ದರು. ಈ ಪ್ರಕರಣ ಕೋರ್ಟ್ ನಲ್ಲಿದ್ದು, ಫೆ.1ರಂದು ಸಿಧುಗೆ ಜಾಮೀನು ಸಿಕ್ಕಿತ್ತು. ಆದರೆ ಇದೀಗ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಮ್ಮನ ಸಾವಿಗೆ ಕಾರಣವಾದ ಮಗಳ ವಾಟ್ಸಾಪ್ ಸ್ಟೇಟಸ್‌

ಬಹುಕೋಟಿ ಮೇವು ಹಗರಣ: ಲಾಲೂ ಪ್ರಸಾದ್ ಯಾದವ್‌ ದೋಷಿ; ಸಿಬಿಐ ಕೋರ್ಟ್‌

ಜಮೀನಿನಲ್ಲಿ ಕುಳಿತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಶಬರಿಮಲೆಗೆ ತೆರಳಿದ ಕರ್ನಾಟಕದ ಟಿಟಿ ವಾಹನ ಅಪಘಾತ: ಮೂವರ ಸಾವು, 11 ಮಂದಿಗೆ ಗಾಯ

ಹುಟ್ಟುಹಬ್ಬದಂದೇ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು

ಇತ್ತೀಚಿನ ಸುದ್ದಿ