ಕುಂಕುಮ ಇಟ್ಟು ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಕಾಲೇಜು!
ವಿಜಯಪುರ: ಹಣೆಗೆ ಸಿಂಧೂರ ಹಚ್ಚಿಕೊಂಡು ಬಂದಿದ್ದ ವಿದ್ಯಾರ್ಥಿಯನ್ನು ತಡೆದು, ಕುಂಕುಮ ಅಳಿಸಿ ಕ್ಲಾಸ್ ಗೆ ಹೋಗುವಂತೆ ಶಿಕ್ಷಕರು ಹೇಳಿದ್ದು, ಆತ ನಿರಾಕರಿಸಿದ ವೇಳೆ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಕುಂಕುಮ ಅಳಿಸಿ ಕಾಲೇಜು ಪ್ರವೇಶಿಸುವಂತೆ ಉಪನ್ಯಾಸಕರು ತಾಕೀತು ಮಾಡಿದ್ದಾರೆ. ಆದರೆ, ವಿದ್ಯಾರ್ಥಿ ನಾನು ಇಷ್ಟು ದಿನಗಳಿಂದ ಕುಂಕುಮ ಹಾಕಿಕೊಂಡು ಬರುತ್ತಿದ್ದೇನೆ. ಇಂದು ಹೊಸತಲ್ಲ ಎಂದು ಶಿಕ್ಷಕರೊಂದಿಗೆ ವಾದಿಸಿದ್ದು, ಆದರೆ, ಶಿಕ್ಷಕರು, ಕುಂಕುಮ ಅಳಿಸಿ ಕಾಲೇಜಿಗೆ ಪ್ರವೇಶಿಸುವಂತೆ ಹೇಳಿದ್ದಾರೆ.
ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವಾಗ ಹಣೆಗೆ ಕುಂಕುಮ, ಸಿಂಧೂರ ಹಚ್ಚಿಕೊಂಡು ಬರುವುದು ಕೂಡ ವಿವಾದಕ್ಕೆ ಕಾರಣವಾಗುತ್ತದೆ ಎಂದು ಕಾಲೇಜಿನ ದೈಹಿಕ ನಿರ್ದೇಶಕರು ಸಲಹೆ ನೀಡಿದಾಗ ವಿದ್ಯಾರ್ಥಿಗಳು-ಉಪನ್ಯಾಸಕರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.
ಹಿಜಾಬ್ ಮತ್ತು ಕೇಸರಿ ಶಾಲು ಹೊರತುಪಡಿಸಿ, ಹಣೆಗೆ ಕುಂಕುಮ, ನಾಮ ಹಾಕಿಕೊಂಡು ಬರಬಾರದು ಎಂದು ಹೇಳಿದರೆ ಹೇಗೆ? ಅದು ನಮ್ಮ ಸಂಸ್ಕೃತಿ ಎಂದು ವಿದ್ಯಾರ್ಥಿ ಪಟ್ಟು ಹಿಡಿದಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ವಿದ್ಯಾರ್ಥಿಯ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊವಿಡ್ ನಂತರ ಆತಂಕ ಸೃಷ್ಟಿಸಿದ ಹಕ್ಕಿ ಜ್ವರ!
ಮಾಟಗಾತಿ ಎಂದು ಆರೋಪಿಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ಗ್ರಾಮಸ್ಥರು!
ತಾಯಿಯ ಮೇಲೆ ಜೀಪ್ ಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ
ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ ಅಭ್ಯರ್ಥಿ ಹೃದಯಾಘಾತದಿಂದ ಸಾವು
ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರನ ದಾರುಣ ಸಾವು