ಸೆಲ್ಫಿಗೆ ಬೇಡಿಕೆ ಇಟ್ಟ ಅಭಿಮಾನಿಗೆ ಥಳಿತ: ನಟ ಧನ್ವೀರ್ ವಿರುದ್ಧ ಎಫ್ ಐ ಆರ್
ಬೆಂಗಳೂರು: ನಟ ಧನ್ವೀರ್ ತನ್ನ ಅಭಿಮಾನಿಯ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಧನ್ವೀರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ಎಸ್. ಸಿ .ರಸ್ತೆಯಲ್ಲಿನ ಅನುಪಮಾ ಥಿಯೇಟರ್ ಗೆ ಬೈ ಟೂ ಲವ್ ಸಿನಿಮಾ ರಿಲೀಸ್ ಸಂಬಂಧ ಧನ್ವೀರ್ ತೆರಳಿದ್ದರು. ಈ ವೇಳೆ ಅಭಿಮಾನಿ ಚಂದ್ರಶೇಖರ್ ಎಂಬವರು ಧನ್ವೀರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟಿದ್ದಾರೆ. ಆದರೆ ಧನ್ವೀರ್ ಇದನ್ನು ನಿರಾಕರಿಸಿದ್ದಾರೆನ್ನಲಾಗಿದೆ.
ಇದರಿಂದ ಬೇಸರಗೊಂಡ ಚಂದ್ರಶೇಖರ್ ಅಸಮಾಧಾನ ಹೊರ ಹಾಕಿದ್ದು, ಈ ವೇಳೆ ಧನ್ವೀರ್ ಹಾಗೂ ಅವರ ಜೊತೆಗಿದ್ದ ಬೌನ್ಸರ್ ಗಳು ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು, ಕೇವಲ 2 ಪ್ಲಾಪ್ ಸಿನಿಮಾಗಳನ್ನು ಮಾಡಿಯೇ ಅಭಿಮಾನಿಗಳ ಮೇಲೆ ಈ ರೀತಿ ಎಗರಾಡುತ್ತಿದ್ದಾರೆ. ಇನ್ನೇನಾದರೂ ಹಿಟ್ ಸಿನಿಮಾ ನೀಡಿದ್ದರೆ, ಈತ ನೆಲದಲ್ಲಿ ನಿಲ್ಲುತ್ತಿರಲಿಲ್ಲ ಎಂದು ನೆಟ್ಟಿಗರು ಧನ್ವೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಜಾಬ್ ಪರ ಪ್ರತಿಭಟನೆ: 58 ವಿದ್ಯಾರ್ಥಿನಿಯರ ಅಮಾನತು
ಸೌದೆ ತರಲು ಹೋಗಿದ್ದ ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ?
ಗಾಂಜಾ ಸೇದಲು ಪ್ರೇರಣೆ ನೀಡಿದ್ರಾ ಪುನೀತ್ ಕೆರೆಹಳ್ಳಿ?
ಯೇಸುವಿನ ಪ್ರತಿಮೆ ಧ್ವಂಸ: ಕ್ರಿಶ್ಚಿಯನ್ನರ ಮೇಲಿನ ದಾಳಿಗೆ ಉದಾಹರಣೆ: ಕ್ಯಾಥೋಲಿಕ್ ಬಿಷಪ್ ಗಳಿಂದ ಬೇಸರ
ವಿವಾದಿತ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವರ್ಗಾವಣೆ
ಮುಸ್ಲಿಮರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಅನ್ಯಕೋಮಿನ ಐವರು ಪೊಲೀಸ್ ವಶಕ್ಕೆ