ಹಳೆ ದ್ವೇಷದ ಹಿನ್ನೆಲೆ: ಚಿಕ್ಕಮ್ಮನ ಕೊಲೆ ಯತ್ನ | ಆರೋಪಿಗಳ ಬಂಧನ - Mahanayaka
11:53 AM Thursday 12 - December 2024

ಹಳೆ ದ್ವೇಷದ ಹಿನ್ನೆಲೆ: ಚಿಕ್ಕಮ್ಮನ ಕೊಲೆ ಯತ್ನ | ಆರೋಪಿಗಳ ಬಂಧನ

crime
20/02/2022

ಉಡುಪಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಚಿಕ್ಕಮ್ಮನನ್ನೇ ಪ್ಲಾಸ್ಟಿಕ್‌  ಚೀಲದಲ್ಲಿ ತುಂಬಿಸಿ ಕೊಲೆಗೆ ಯತ್ನಿಸಿರುವ ಘಟನೆ ಶಿವಳ್ಳಿಯ ಮಂಚಿಕುಮೇರಿಯಲ್ಲಿ ನಡೆದಿದೆ.

ಮಂಚಿ ಕುಮೇರಿಯ ಸುಮತಿ ಅವರನ್ನು ಪ್ಲಾಸ್ಟಿಕ್‌  ಚೀಲದಲ್ಲಿ ತುಂಬಿಸಿ ಕೊಲೆಗೆ ಯತ್ನಿಸಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧ ಸುಮತಿಯ ಅಕ್ಕನ ಮಗ ಮಂಗಳೂರಿನ ಮಿಥುನ್‌ ಹಾಗೂ ಆತನ ಸ್ನೇಹಿತ ನಾಗೇಶ್‌ ನನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದ ಸುಮತಿಯವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪಾಯಕಾರಿ ಬೈಕ್​ ವ್ಹೀಲಿಂಗ್‌ ನಲ್ಲಿ ತೊಡಗಿದ್ದ ಯುವಕನ ಬಂಧನ

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆ ಹೃದಯಾಘಾತದಿಂದ ನಿಧನ!

ಕೌಟುಂಬಿಕ ಕಲಹ: ಇಬ್ಬರು ಯುವಕರ ಬರ್ಬರ ಹತ್ಯೆ

ಮೊಬೈಲ್ ಕೊಡಿಸಲ್ಲ ಎಂದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದು ದೊಡ್ಡ ಸುದ್ದಿಯಾಯ್ತು, ಬೆಂಗಳೂರು ನೀಲಿಯಾಗಿದ್ದು ಸುದ್ದಿಯಾಗಲಿಲ್ಲ | ಕವಿರಾಜ್ ಬೇಸರ

 

ಇತ್ತೀಚಿನ ಸುದ್ದಿ