ಸಾಲದ ಹೊರೆ: ವಿಷ ಸೇವಿಸಿ ರೈತ ಆತ್ಮಹತ್ಯೆ
ಶಿಕಾರಿಪುರ: ಸಾಲದ ಹೊರೆ ಹಾಗೂ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನವಾಗುವ ಆತಂಕದಿಂದ ಮನನೊಂದು ರೈತರೊಬ್ಬರು ಕೃಷಿ ಭೂಮಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಹಾರೋಗೊಪ್ಪ ಗ್ರಾಮದ ನಿವಾಸಿ ಅರುಣ್ ನಾಯ್ಕ(30) ಮೃತ ರೈತ. ಇವರು ತಮ್ಮ ಕೃಷಿ ಭೂಮಿಯಲ್ಲಿ ಅಡಿಕೆ ಹಾಗೂ ಮೆಕ್ಕೆಜೋಳ ಬೆಳೆದಿದ್ದರು. ಈ ಭೂಮಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಹೋಗುತ್ತದೆ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿಕರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಕ್ಸ ಲ್ ತುಂಡಾಗಿ ಹೆದ್ದಾರಿಯಲ್ಲೇ ಕಾರು ಪಲ್ಟಿ: ಮೂವರು ಗಂಭೀರ
ಹಳೆ ದ್ವೇಷದ ಹಿನ್ನೆಲೆ: ಚಿಕ್ಕಮ್ಮನ ಕೊಲೆ ಯತ್ನ | ಆರೋಪಿಗಳ ಬಂಧನ
ಅಪಾಯಕಾರಿ ಬೈಕ್ ವ್ಹೀಲಿಂಗ್ ನಲ್ಲಿ ತೊಡಗಿದ್ದ ಯುವಕನ ಬಂಧನ
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆ ಹೃದಯಾಘಾತದಿಂದ ನಿಧನ!
ಕೌಟುಂಬಿಕ ಕಲಹ: ಇಬ್ಬರು ಯುವಕರ ಬರ್ಬರ ಹತ್ಯೆ