ಯುವತಿಯ ಖಾಸಗಿ ಫೋಟೋ ಆಕೆಯ ತಂದೆಗೆ ಕಳುಹಿಸಿ ಬೆದರಿಕೆ: ರೌಡಿಶೀಟರ್ ಬಂಧನ - Mahanayaka
7:38 PM Wednesday 11 - December 2024

ಯುವತಿಯ ಖಾಸಗಿ ಫೋಟೋ ಆಕೆಯ ತಂದೆಗೆ ಕಳುಹಿಸಿ ಬೆದರಿಕೆ: ರೌಡಿಶೀಟರ್ ಬಂಧನ

blackmaill
21/02/2022

ಬೆಂಗಳೂರು: ಯುವತಿಯೋರ್ವಳ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ, ಆಕೆಯ ತಂದೆಗೆ ಫೋಟೋಗಳನ್ನು ಕಳುಹಿಸಿದ್ದ ರೌಡಿಶೀಟರ್‌ನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ರೌಡಿಶೀಟರ್ ನಂದೀಶ್ ಬಂಧಿತ ಆರೋಪಿ. ಈತ ಯುವಕನೊಬ್ಬನ ಬಳಿಯಿಂದ ಯುವತಿಯ ಖಾಸಗಿ ಫೋಟೋ ಪಡೆದಿದ್ದ. ಆ ಫೋಟೋಗಳನ್ನು ಇಟ್ಟುಕೊಂಡು ಯುವತಿಗೆ ಬೆದರಿಕೆ ಹಾಕುತ್ತಿದ್ದ. ಆಕೆಯ ತಂದೆಗೂ ಫೋಟೋ ಕಳುಹಿಸಿ ಬೆದರಿಕೆಯೊಡ್ಡಿದ್ದ. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಈ ಘಟನೆ ಸಂಬಂಧ ಯುವತಿಯ ದೂರು ಆಧರಿಸಿ ರೌಡಿಶೀಟರ್ ನಂದೀಶ್​​ನನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಜರಂಗದಳದ ಕಾರ್ಯಕರ್ತನ ಬರ್ಬರ ಕೊಲೆ; ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ; ಶಾಲಾ-ಕಾಲೇಜುಗಳಿಗೆ ರಜೆ

ಬಹಿರಂಗ ಸಮಾವೇಶದಲ್ಲಿಯೇ ಬಿಜೆಪಿ ಮುಖಂಡನ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ

ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ: ಓರ್ವ ಆರೋಪಿ ವಶಕ್ಕೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಜರಂಗದಳದ ಕಾರ್ಯಕರ್ತನ ಬರ್ಬರ ಹತ್ಯೆ!

ವಡಾಪಾವ್ ತಿಂದು ಬಿಲ್ ಪಾವತಿಸದೇ ತೆರಳಿದ್ದ ಕೇಂದ್ರ ಸಚಿವರಿಗೆ ತೀವ್ರ ಮುಜುಗರ!

 

ಇತ್ತೀಚಿನ ಸುದ್ದಿ