ಬಹಿರಂಗ ಸಮಾವೇಶದಲ್ಲಿಯೇ ಬಿಜೆಪಿ ಮುಖಂಡನ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ - Mahanayaka
5:39 AM Thursday 12 - December 2024

ಬಹಿರಂಗ ಸಮಾವೇಶದಲ್ಲಿಯೇ ಬಿಜೆಪಿ ಮುಖಂಡನ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ

unnavo elesction
21/02/2022

ಲಕ್ನೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಪ್ರಚಾರಕ್ಕೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಹಿರಂಗ ಸಮಾವೇಶದಲ್ಲಿಯೇ ಬಿಜೆಪಿ ಮುಖಂಡನ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾನುವಾರ ಮೋದಿ ಅವರು ರ್‍ಯಾಲಿಗೆ ಆಗಮಿಸುತ್ತಿದ್ದಂತೆ ಬಿಜೆಪಿಯ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್ ಶ್ರೀರಾಮನ ವಿಗ್ರಹವನ್ನು ಮೋದಿ ಅವರಿಗೆ ನೀಡಿದರು.

ಈ ವೇಳೆ ಅವಧೇಶ್ ಕಟಿಯಾರ್ ಅವರು ವಿಗ್ರಹವನ್ನು ನೀಡಿದ ಬಳಿಕ, ಉನ್ನಾವೋ ಜಿಲ್ಲಾ ಬಿಜೆಪಿ ಅಧ್ಯಕ್ಷ ಅವಧೇಶ್ ಕಟಿಯಾರ್, ಪ್ರಧಾನಿ ಮೋದಿಯವರ ಕಾಲಿಗೆ ಬಿದ್ದು ನಮಸ್ಕರಿಸಲು ಮುಂದಾದರು. ಈ ವೇಳೆ ಕಟಿಯಾರ್ ಅವರನ್ನು ತಡೆದ ಪ್ರಧಾನಿ ಮೋದಿ, ಪಾದಗಳನ್ನು ಸ್ಪರ್ಧಿಸುವುದು ಸರಿಯಲ್ಲ ಎಂದು ಸನ್ನೆ ಮಾಡಿದರು. ಪ್ರತಿಯಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅವಧೇಶ್ ಕಟಿಯಾರ್ ಪಾದವನ್ನು ಮುಟ್ಟಿದರು. ಪ್ರಧಾನಿಯವರ ಈ ನಡೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತೀಯ ಜನತಾ ಪಕ್ಷದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್, ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆ. 23ರಂದು ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯಲಿದೆ.ಉನ್ನಾವೊದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಕಿಡಿಕಾರಿದರು.

ನೀವು ನೋಡಿರಬೇಕು, ವೇದಿಕೆಯಿಂದ ತಳ್ಳಲ್ಪಟ್ಟ ತಂದೆ ಮುಲಾಯಂ ಸಿಂಗ್ ಯಾದವ್ ಅವಮಾನಕ್ಕೊಳಗಾದರೂ, ಪಕ್ಷ ಅವರನ್ನು ಹಿಡಿದುಕೊಂಡಿತು. ಅದೇ ರೀತಿ ಮುಲಾಯಂ ಅವರ ಕರ್ಹಾಲ್ ಅನ್ನು ಉಳಿಸಿಕೊಳ್ಳಲು ಅಖಿಲೇಶ್ ಮನವಿ ಮಾಡಿಕೊಳ್ಳಬೇಕಾಯಿತು. ರಾಜವಂಶಸ್ಥರಿಗೆ ಅವರ ಮತ್ತು ಅವರ ಆಪ್ತರ ಹಿತಾಸಕ್ತಿಯೇ ಹೆಚ್ಚಿನ ಆದ್ಯತೆಯಾಗಿದೆ ಎಂದು ವ್ಯಂಗ್ಯವಾಡಿದರು.

ಉನ್ನಾವೋದ 6 ಕ್ಷೇತ್ರಗಳಲ್ಲಿ ಫೆ.23ರಂದು ಮತದಾನ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆ. 23ರಂದು ಚುನಾವಣೆಯ ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 403 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾ. 7ರಂದು ಅಂತಿಮ ಹಾಗೂ ಏಳನೇ ಹಂತದ ಮತದಾನ ನಡೆಯಲಿದ್ದು, ಮಾ. 10ರಂದು ಫಲಿತಾಂಶ ಹೊರ ಬೀಳಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ: ಓರ್ವ ಆರೋಪಿ ವಶಕ್ಕೆ

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಜರಂಗದಳದ ಕಾರ್ಯಕರ್ತನ ಬರ್ಬರ ಹತ್ಯೆ!

ನಂದಿಬೆಟ್ಟದಿಂದ ಬೆಟ್ಟದಿಂದ ಜಾರಿ ಬಿದ್ದ ಯುವಕ: ಅಗ್ನಿ ಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ

ಒಂದೇ ಕುಟುಂಬದ ಮೂವರ ಸಜೀವ ದಹನ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

 

ಇತ್ತೀಚಿನ ಸುದ್ದಿ