ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಉರುಳಿ ಬಿದ್ದು10 ಮಂದಿ ಸಾವು
ಉತ್ತರಾಖಂಡ: ಮದುವೆ ಸಂಭ್ರಮ ಮುಗಿಸಿ ಹಿಂದಿರುಗುತ್ತಿದ್ದ ವಾಹನವೊಂದು ಆಳದ ಕಮರಿಗೆ ಬಿದ್ದು 10ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿಧಾಂಗ್-ದಂಡಮಿನಾರ್ ರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರು ಚಂಪಾವತ್ ಜಿಲ್ಲೆಯ ತನಕ್ಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಮ್ಯಾಕ್ಸ್ ವಾಹನ ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.
ತಕ್ಷಣ ಮಾಹಿತಿ ತಿಳಿದ ಪೊಲೀಸರು, ರಕ್ಷಣಾ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಚಮೋಲಿ ದುರಂತ: ಒಂದು ವರ್ಷದ ನಂತರ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಕೊಲಂಬಿಯಾದಲ್ಲಿ ಆರು ತಿಂಗಳವರೆಗೆ ಗರ್ಭಪಾತ ಅಪರಾಧವಲ್ಲ: ನ್ಯಾಯಾಲಯದ ಮಹತ್ವದ ತೀರ್ಪು
ಚಿನ್ನದ ಗಣಿಯಲ್ಲಿ ಸ್ಫೋಟ: 59 ಮಂದಿ ಸಾವು; ನೂರಕ್ಕೂ ಹೆಚ್ಚು ಮಂದಿಗೆ ಗಾಯ
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ: ಡಿಜಿಪಿ ಸ್ಪಷ್ಟನೆ