ಬಿಜೆಪಿ ಪರಿವಾರಕ್ಕೆ ತೀವ್ರ ಮುಖಭಂಗ: ಅಂತರ್ ಧರ್ಮೀಯ ಮದುವೆ ತಪ್ಪಲ್ಲ ಎಂದ ಕೋರ್ಟ್ - Mahanayaka
10:21 AM Sunday 8 - September 2024

ಬಿಜೆಪಿ ಪರಿವಾರಕ್ಕೆ ತೀವ್ರ ಮುಖಭಂಗ: ಅಂತರ್ ಧರ್ಮೀಯ ಮದುವೆ ತಪ್ಪಲ್ಲ ಎಂದ ಕೋರ್ಟ್

24/11/2020

ಅಲಹಾಬಾದ್​: ‘ಲವ್ ಜಿಹಾದ್’ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಅಂತರ್ ಧರ್ಮೀಯ ಮದುವೆಗಳಿಗೆ ತಡೆಯೊಡ್ಡುವ ಬಿಜೆಪಿ ಪರಿವಾರದ ಕನಸಿಗೆ ತೀವ್ರ ಹಿನ್ನಡೆಯಾಗಿದೆ.

ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಸರಿಯಲ್ಲ ಎಂದು ಅಲಹಾಬಾದ್ ಹೈಕೋರ್ಟ್​ನ ಏಕಸದಸ್ಯಪೀಠವು ತೀರ್ಪು ನೀಡಿದ್ದ ಬೆನ್ನಲ್ಲೇ ಅಂತರ್ ಧರ್ಮೀಯ ಮದುವೆಯನ್ನು ತಡೆಯಲು ಉತ್ತರ ಪ್ರದೇಶ ಸೇರಿದಂತೆ  ಬಿಜೆಪಿ ಆಡಳಿತ ಇರುವ ಹಲವು ರಾಜ್ಯಗಳು ಮುಂದಾಗಿತ್ತು. ಕರ್ನಾಟಕ ಸಿಎಂ ಯಡಿಯೂರಪ್ಪ ಕೂಡ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಪ್ರಸ್ತಾಪವನ್ನಿಟ್ಟಿದ್ದರು. ಆದರೆ ಬಿಜೆಪಿಯ ಆತುರದ ನಿರ್ಧಾರದ ನಡುವೆ ನಡೆದ ಬೆಳವಣಿಗೆಯೊಂದರಲ್ಲಿ ಅಲಹಾಬಾದ್ ಹೈಕೋರ್ಟ್​ನ ಏಕಸದಸ್ಯಪೀಠವು ನೀಡಿದ್ದ ತೀರ್ಪನ್ನು ರದ್ದುಗೊಳಿಸಲಾಗಿದೆ.

ಹೈಕೋರ್ಟ್​ನ ಏಕಸದಸ್ಯಪೀಠ ನೀಡಿದ್ದ ಈ ತೀರ್ಪನ್ನು ವಿಭಾಗೀಯ ಪೀಠವು ರದ್ದು ಮಾಡಿದ್ದು, ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ. ಆದ್ದರಿಂದ ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಮಾನ್ಯವಲ್ಲವೆನ್ನುವುದು ಸರಿಯಲ್ಲ. ಇದು ಅಷ್ಟೊಂದು ಉತ್ತಮ ಕಾನೂನು ಅಲ್ಲ ಎಂದು ಹೇಳಿದೆ.


Provided by

 ‘ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಲಿಂಗಿಗಳು ಒಟ್ಟಿಗೇ ಇರಲು ಅನುಮತಿ ಇರುವಂಥ ಈ ಸಂದರ್ಭದಲ್ಲಿ ಇಬ್ಬರು ಪ್ರಾಪ್ತ ವಯಸ್ಸಿನ ಗಂಡು-ಹೆಣ್ಣು ತಮ್ಮ ಇಷ್ಟದ ಧರ್ಮೀಯರನ್ನು ಮದುವೆಯಾಗಿ ಮತಾಂತರವಾದರೆ ಅದನ್ನು ತಪ್ಪು ಎಂದು ಹೇಳುವುದು ಅಷ್ಟು ಸಮಂಜಸವಲ್ಲ’ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಮತ್ತು ಪಂಕಜ್ ನಖ್ವಿ ಅವರ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.


ಇತ್ತೀಚಿನ ಸುದ್ದಿ