ನಟ ಚೇತನ್ ಬಂಧನ ವಿಚಾರ: ಪೊಲೀಸರ ನಡೆ ಅನುಮಾನಾಸ್ಪದವಾಗಿದೆ; ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ
ಬೆಂಗಳೂರು: ನಟ ಚೇತನ್ ಬಂಧನದ ಕುರಿತು ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಸರಣಿ ಟ್ವಿಟ್ ಮಾಡಿದ್ದು, ಪೊಲೀಸರ ನಡೆ ಅನುಮಾನಾಸ್ಪದವಾಗಿದೆ. ಹಾಗಾಗಿ ಇದು ಸರಿಯಾದ ನಡೆಯಲ್ಲ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ನಟ ಚೇತನ್ ಬಂಧನದ ಈ ಕುರಿತು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎರಡು ಪುಟಗಳ ಪತ್ರ ಬರೆದಿರುವ ಅನುಪಮಾ ಶೆಣೈ, ಪೊಲೀಸ್ ನಡೆಯ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸುವಾಗ ಕೆಲವು ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರಿಂಕೋರ್ಟ್ ಹೇಳಿದೆ. ಈ ಕ್ರಮಗಳನ್ನು ಮೀರಿ ಚೇತನ್ ಅಹಿಂಸಾರನ್ನು ಶೇಷಾದ್ರಿಪುರಂ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ.ಈ ಬಗ್ಗೆ ಒಂದು ಸೊಮೋಟೊ ಕಂಟ್ಮೆಂಪ್ಟ್ ಆಫ್ ಕೋರ್ಟ್ ಕೇಸನ್ನು ಶೇಷಾದ್ರಿಪುರಂ ಪೊಲೀಸರ ಮೇಲೆ ಯಾಕೆ ದಾಖಲಿಸಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ, ದುರ್ಬಲರು, ಧ್ವನಿ ರಹಿತರ ಪರವಾಗಿ ಧ್ವನಿಯಾಗಲು ಅಥವಾ ಸಾರ್ವಜನಿಕ ವ್ಯವಸ್ಥೆ ಕುಸಿದಾಗ ಪೊಲೀಸರೇ ಸೊಮೊಟೋ ಕೇಸ್ ದಾಖಲಿಸುತ್ತಾರೆ. ಪೊಲೀಸರಿಗೆ ಎಫ್ಐಆರ್ ದಾಖಲಿಸಲು ಕರ್ನಾಟಕದಲ್ಲಿ ಅಪರಾಧಿಗಳ ಕೊರತೆಯಿದ್ದು, ಅದಕ್ಕಾಗಿ ಏನಾದರೂ ನೆಟ್ಟಿಗರ ಮೇಲೆ ಎಫ್ ಐ ಆರ್ ದಾಖಲಿಸುತ್ತೀರಿ ಎಂದಾದರೆ, ಪೊಲೀಸ್ ಇಲಾಖೆಯಲ್ಲೇ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರಗಳ ಮಾಹಿತಿಯನ್ನು ನಾನು ನೀಡುತ್ತೇನೆ. ಅವುಗಳ ಮೇಲೆ ನೀವು ಸೋ ಮೋಟೋ ಎಫ್‍ಐಆರ್ ದಾಖಲಿಸಿ ಎಂದು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಾಮೂಹಿಕ ಅತ್ಯಾಚಾರ: ಮನನೊಂದು ಯುವತಿ ಆತ್ಮಹತ್ಯೆ
ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು
ಆನೆಕಾಲು ರೋಗ ತಡೆ ಮಾತ್ರೆ ಸೇವನೆ: 19 ವಿದ್ಯಾರ್ಥಿಗಳು ಅಸ್ವಸ್ಥ
ಹರ್ಷ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ
ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಆರೋಪ: ಪಿ ಆರ್ ಓ ವಜಾಕ್ಕೆ ಆಗ್ರಹಿಸಿ ಧರಣಿ