‘ಓ ಅಂಟಾವಾ’ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್ ಮಹಿಳೆ
ನವದೆಹಲಿ: ಡಚ್ ಮಹಿಳೆ ಎಮ್ಮಾ ಹೀಸ್ಟರ್ಸ್ ಪುಷ್ಪ ಚಿತ್ರದ ಓ ಅಂಟವಾ ಹಾಡನ್ನು ಹಾಡುವ ಮೂಲಕ ಭಾರತೀಯರ ಮನಗೆದ್ದಿದ್ದಾರೆ. ಇನ್ಸ್ಟಾಗ್ರಾಮನ್ನಲ್ಲಿ ಹಾಡನ್ನು ಹಂಚಿಕೊಳ್ಳುವ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಹಿಂದೆ ಶ್ರೀವಲ್ಲಿ ಹಾಡಿಗೆ ಧನಿಯಾಗಿದ್ದ ಡಚ್ ಮಹಿಳೆ ಇದೀಗ ಓ ಅಂಟವಾ ಹಾಡನ್ನು ಮೂಲಕ ಭಾರತೀಯರ ಮನಗೆದ್ದಿದ್ದಾರೆ.
ಪುಷ್ಪ ಚಿತ್ರ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿದೆ. ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿ ಸಖತ್ ಹಿಟ್ ಆಗಿದ್ದು, ಪ್ರೇಕ್ಷಕರ ಮನ ಗೆದ್ದಿದೆ. ಆದರೂ ಚಿತ್ರದ ಹಾಡು, ಡೈಲಾಗ್ಗಳ ಕ್ರೇಜ್ ಇನ್ನೂ ಮುಗಿದಿಲ್ಲ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಹಾಡಿನ ಕ್ರೇಜ್ ಮುಂದುವರಿದಿದೆ.
ಎಮ್ಮಾ ಹೀಸ್ಟರ್ಸ್ ಈ ಹಿಂದೆ ಬಾಲಿವುಡ್ನ ಬಿಜಲಿ ಸೇರಿದಂತೆ ಹಲವು ಹಾಡನ್ನು ಹಾಡಿದ್ದಾರೆ. ವಿದೇಶಿ ಮಹಿಳೆಯಾಗಿದ್ದರೂ ಭಾರತದ ಹಾಡುಗಳ ಮೇಲಿನ ಪ್ರೀತಿ ನೋಡಿ ಭಾರತೀಯರೂ ಕೂಡ ಅಚ್ಚರಿಗೊಂಡಿದ್ದಾರೆ. ಎಮ್ಮಾ ಹೀಸ್ಟರ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಎಮ್ಮಾ ಅವರ ಸಾಂಗ್ ಕೇಳಿ ನೆಟ್ಟಿಗರು ಅಚ್ಚರಿಗೊಂಡಿದ್ದು, ವಾವ್ ಎಂದು ಉದ್ಘರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹರ್ಷ ಕೊಲೆ ಪ್ರಕರಣ: 6 ಮಂದಿ ಆರೋಪಿಗಳಿಗೆ ಮಾ. 7ರ ವರೆಗೆ ನ್ಯಾಯಾಂಗ ಬಂಧನ
ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ
ಸಾಲಬಾಧೆ: ಮಗಳನ್ನು ಕೊಂದು ತಂದೆ ಆತ್ಮಹತ್ಯೆ
ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ, ಎನ್ ಸಿಪಿ ನಾಯಕ ನವಾಬ್ ಮಲಿಕ್ ಬಂಧನ
ಚಿನ್ನದಂಗಡಿಯ ಗೋಡೆ ಕೊರೆದು 2 ಕೆ.ಜಿ. ಚಿನ್ನ ಕಳವು ಮಾಡಿದ ಕಳ್ಳರು!