ಅಗ್ನಿ ಅವಘಡ: ಕಟ್ಟಡದಿಂದ ಜಿಗಿದು ಜೀವ ಉಳಿಸಿಕೊಂಡ ತಾಯಿ, ಮಗಳು
ಕಾರವಾರ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗೆ ಬೆಂಕಿ ತಗುಲಿದ್ದು, ಈ ವೇಳೆ ಮಳಿಗೆಯ ಮೇಲಿನ ಮನೆಯಲ್ಲಿದ್ದ ತಾಯಿ, ಮಗಳು ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಭಾರತಿ ಮಡಿವಾಳ್ ಹಾಗೂ ಈಕೆಯ ಮಗಳು ಮೇಘನಾ ಮಡಿವಾಳ ಪ್ರಾಣಾಪಾಯದಿಂದ ಪಾರಾದವರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನಟರಾಜ ರಸ್ತೆಯ ಎರಡು ಅಂಗಡಿಗಳಲ್ಲಿ ಇಂದು ಬೆಳಗ್ಗೆ ಕಟ್ಟಡಕ್ಕೆ ಬೆಂಕಿ ತಗಲುತ್ತಿದ್ದಂತೆ ಮಳಿಗೆ ಮನೆಯಲ್ಲಿ ವಾಸವಿದ್ದ ತಾಯಿ, ಮಗಳು ಹೊರಕ್ಕೆ ಬರಲಾರದ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ತಾಯಿ, ಮಗಳಿಬ್ಬರೂ ಪ್ರಾಣ ಉಳಿಸಿಕೊಳ್ಳಲು ಮಾಳಿಗೆಯಿಂದ ಜಿಗಿದಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು ಚಾದರ ಬಳಸಿ ಹಿಡಿದು ರಕ್ಷಿಸಿದ್ದಾರೆ.
ಮಳಿಗೆಗೆ ಬೆಂಕಿ ತಗುಲಿದ್ದರಿಂದ ಭಾರತಿ ಅವರಿಗೆ ಸೇರಿದ್ದ ಮೇಘನಾ ಟೇಲರ್ ಅಂಗಡಿ, ಪಕ್ಕದಲ್ಲಿರುವ ರಂಗನಾಥ ರಾಯ್ಕರ್ ಅವರಿಗೆ ಸೇರಿದ ಬ್ಯೂಟಿಕ್ ಪರ್ಲ್ ಮಳಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಉಪಕರಣಗಳು ಸುಟ್ಟು ಕರಕಲಾಗಿದೆ.
ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪರಿಶೀಲಿಸಿದ್ದು, ಹಾನಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಷ್ಯಾ ಆಕ್ರಮಣ ಆರಂಭ: ಉಕ್ರೇನ್ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ
ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು; 6 ತಿಂಗಳ ಬಳಿಕ ಆರೋಪಿ ಬಂಧನ
ನವವಿವಾಹಿತೆ ಟೆಕ್ಕಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಆರೋಪ
ರಷ್ಯಾ ವಿರುದ್ಧ ಪ್ರತಿದಾಳಿ: ಐದು ವಿಮಾನ, ಒಂದು ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್’
ಸಾಮೂಹಿಕ ಅತ್ಯಾಚಾರ: ಮನನೊಂದು ಯುವತಿ ಆತ್ಮಹತ್ಯೆ