ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ: ಪ್ರಮೋದ್ ಮುತಾಲಿಕ್
ಮಂಡ್ಯ: ಈ ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ. ಕುರಾನ್ ಆಧಾರದ ಮೇಲೆ ನಡೆಯಬೇಕು ಅಂದರೆ ಒದ್ದು ಓಡಿಸುತ್ತೇವೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಷರಿಯಾ ಕಾನೂನಿದೆ ಅಲ್ಲೇ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ. ಇಲ್ಲಿ ಪ್ರಜಾಪ್ರಭುತ್ವ, ಸಂವಿಧಾನವಿದೆ. ಇದೇ ಪ್ರಕಾರ ನಡೆಯಬೇಕು ಎಂದರು.
ಹಿಜಾಬ್ ಮುಖ್ಯ, ಧರ್ಮ ಮುಖ್ಯ ಅಂತ ಹೇಳುವಂತದ್ದು ಮೂರ್ಖ ಪ್ರವೃತ್ತಿಯ ಮಾನಸಿಕತೆ. ನಾನು ಆ ವಿದ್ಯಾರ್ಥಿಗೆ ಇಸ್ಲಾಮಿಕ್ ಹೇಳುತ್ತೇನೆ. ಎಲ್ಲಿ ಇಸ್ಲಾಮಿಕ್ ಹುಟ್ಟಿತೋ ಅಲ್ಲೇ ಬುರ್ಕಾ, ಹಿಜಾಬ್ ಕಡ್ಡಾಯವಿಲ್ಲ. ಕೆಲವೊಂದು ದೇಶಗಳಲ್ಲಿ ಬ್ಯಾನ್ ಮಾಡಿದ್ದಾರೆ. ಇಲ್ಲಿ ಯಾಕೆ ಮಾಡುತ್ತಿದ್ದಾರೆ ಅಂದರೆ ಇಲ್ಲಿ ಇಸ್ಲಾಮಿಕ್ ಪೂರ್ಣವಾಗಿಲ್ಲ. ಪೂರ್ಣವಾಗುವವರೆಗೆ ಹೋರಾಟ ಮಾಡುವವರು ಇವರು. ಆ ಆಟ ನಡೆಯಲ್ಲ ಎಂದು ಹೇಳಿದರು.
ಹಿಜಾಬ್ ಮೂರು ಅಡಿಯ ಬಟ್ಟೆಯ ಪ್ರಶ್ನೆ ಅಲ್ಲ. ಇದರ ಹಿಂದೆ ಇರುವಂತಹ ದುಷ್ಟ ಮಾನಸಿಕತೆ ಇವತ್ತು ಕೆಲಸ ಮಾಡುತ್ತಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್
ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಕರ್ನಾಟಕದ ಮೂವರು ವಿದ್ಯಾರ್ಥಿಗಳು!