ಲಂಚಕ್ಕೆ ಬೇಡಿಕೆ: ಆಯುಷ್​ ಅಧಿಕಾರಿ ಎಸಿಬಿ ಬಲೆಗೆ - Mahanayaka
7:32 AM Thursday 12 - December 2024

ಲಂಚಕ್ಕೆ ಬೇಡಿಕೆ: ಆಯುಷ್​ ಅಧಿಕಾರಿ ಎಸಿಬಿ ಬಲೆಗೆ

r g methri
25/02/2022

ಹುಬ್ಬಳ್ಳಿ: ವೈದ್ಯನಿಂದ 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲಾ ಆಯುಷ್​ ಅಧಿಕಾರಿಯನ್ನು ಧಾರವಾಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಆರ್.ಜಿ.ಮೇತ್ರಿ ಎಸಿಬಿ ಬಲೆ ಬಿದ್ದಿರುವ ಭ್ರಷ್ಟ ಅಧಿಕಾರಿ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಹರಿಶ್ಚಂದ್ರ ನಾರಾಯಣಪೂರ ಎಂಬವರು ಆರ್​ಎಂಪಿ ಹೆಸರಿನ ಕ್ಲಿನಿಕ್ ನಡೆಸುತ್ತಿದ್ದರು. ಕ್ಲಿನಿಕ್ ಯಾವುದೇ ಸಮಸ್ಯೆಯಾಗದಂತೆ ನಡೆಸಿಕೊಂಡು ಹೋಗಲು ತಮಗೆ ಮತ್ತು ಡಿಎಚ್ಒ ಅವರಿಗೆ ಸೇರಿ 2 ಲಕ್ಷ ರೂ. ಲಂಚ ನೀಡುವಂತೆ ಆರ್.ಜಿ.ಮೇತ್ರಿ ವೈದ್ಯನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅದರಂತೆ ಮುಂಗಡ 10,000 ರೂ. ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ: ರಿಷಿಕುಮಾರ್ ಸ್ವಾಮೀಜಿಯಿಂದ ಮತ್ತೆ ವಿವಾದಾತ್ಮಕ ಹೇಳಿಕೆ

ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ: ಪ್ರಮೋದ್ ಮುತಾಲಿಕ್

ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್​

ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ: ಪ್ರಮೋದ್ ಮುತಾಲಿಕ್

ಅಗ್ನಿ ಅವಘಡ: ಕಟ್ಟಡದಿಂದ ಜಿಗಿದು ಜೀವ ಉಳಿಸಿಕೊಂಡ ತಾಯಿ, ಮಗಳು

ಇತ್ತೀಚಿನ ಸುದ್ದಿ