ಮೃತ ಹರ್ಷನ ಮೊಬೈಲ್ ಫೋನ್ ಪತ್ತೆಯಾಗಿಲ್ಲ; ಶಿವಮೊಗದಲ್ಲಿ ಎಸ್ ​ಪಿ ಮಾಹಿತಿ - Mahanayaka
6:07 PM Thursday 12 - December 2024

ಮೃತ ಹರ್ಷನ ಮೊಬೈಲ್ ಫೋನ್ ಪತ್ತೆಯಾಗಿಲ್ಲ; ಶಿವಮೊಗದಲ್ಲಿ ಎಸ್ ​ಪಿ ಮಾಹಿತಿ

harsha death case
25/02/2022

ಶಿವಮೊಗ್ಗ: ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಹರ್ಷನ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ ಎಂದು ಎಸ್​ಪಿ ಬಿಎಂ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

ಹರ್ಷ ಮೊಬೈಲ್​ ಗೆ ಯುವತಿಯರು ವಿಡಿಯೋ ಕಾಲ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಎಸ್​ಪಿ, ಹತ್ಯೆಯಾದ ಹರ್ಷನ ಸ್ನೇಹಿತನ ಹೇಳಿಕೆಯನ್ನು ಪಡೆಯಲಾಗಿದೆ. ಯುವತಿಯರು ಯಾರು ಎನ್ನುವ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.

ಈಗಾಗಲೇ ಪ್ರಕರಣದಲ್ಲಿ 2 ಕಾರು, ಒಂದು ಬೈಕ್ ಸೀಜ್ ಮಾಡಲಾಗಿದೆ. ಆದರೆ ಕೃತ್ಯಕ್ಕೆ ಬಳಸಿರುವುದು ಒಂದೇ ಕಾರು ಎಂಬುದು ದೃಢವಾಗಿದೆ. ಇಂದಿನ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ ವಿಸ್ತರಣೆ ಬಗ್ಗೆ ನಿರ್ಧಾರ ಮಾಡಲಾಗುವುದು. ಹರ್ಷನ ಕೊಲೆಗೆ ಹಣ ವರ್ಗಾವಣೆ, ರೌಡಿಗಳ ಪಾತ್ರ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ ಅಂತ ಎಸ್​ಪಿ ಬಿಎಂ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ನಿನ್ನೆ ಅಬ್ದುಲ್ ರೋಶನ್ ಮತ್ತು ಜಾಫರ್ ಸಾಧೀಕ್‌ ನನ್ನು ಬಂಧಿಸಲಾಗಿದೆ. ಅಬ್ದುಲ್ ರೋಶನ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ. ಜಾಫರ್ ಸಾದೀಕ್ ಆರೋಪಿ ಫರಾಜ್ ತಂದೆ. ತಂದೆ ಮಗ ಫರಾಜ್ ತಪ್ಪಿಸಿಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಂದೆ ಜಾಫರ್ ಸಾದೀಕ್ ಬಂಧನ ಆಗಿದೆ. ನಿನ್ನೆ ಕೃತ್ಯಕ್ಕೆ ಬಳಸಿದ ಕಾರ್ ಸೀಜ್ ಆಗಿದೆ. ಕೃತ್ಯಕ್ಕೆ ಬಳಸಿದ ಕಾರು ಯಾರದ್ದು? ಅದರ ಮಾಲೀಕ ಯಾರು? ಎನ್ನುವ ಕುರಿತು ಪತ್ತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹರ್ಷಾನ ಕೊಲೆ ನಡೆದ ಜಾಗ ಮತ್ತು ಆರೋಪಿಗಳ ಮೊಬೈಲ್‌ ಸೇರಿ ಸುಮಾರು 6 ಸಾವಿರ ಮೊಬೈಲ್ ಕಾಲ್‌ಗಳ ಪರಿಶೀಲನೆ ನಡೆಸಿದ್ದಾರೆ. ಹಂತಕರಿಗೆ ಯಾರ ಯಾರ ಸಂಪರ್ಕ ಇದೆ ಎನ್ನುವುದರ ಕುರಿತು ಆಳವಾದ ತನಿಖೆ ನಡೆಯುತ್ತಿದೆ. ಈಗಾಗಲೇ ಗೃಹ ಸಚಿವರು ಕೊಲೆಯ ಹಿಂದೆ ಸಂಘಟನೆ ಕೈವಾಡದ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್‍ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

ಕಾಲೇಜು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ: ಐವರು ಆರೋಪಿಗಳ ಸೆರೆ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಮುಖ್ಯಪೇದೆ ವಿರುದ್ಧ ಎಫ್​ಐಆರ್ ದಾಖಲು

ಚೆರ್ನೋಬಿಲ್‌ ನ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾ ಪಡೆಗಳು

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಮುಖ್ಯಪೇದೆ ವಿರುದ್ಧ ಎಫ್​ಐಆರ್ ದಾಖಲು

 

ಇತ್ತೀಚಿನ ಸುದ್ದಿ