ನನಗೆ ಮದ್ದುಗುಂಡು ನೀಡಿ, ಪ್ರಯಾಣ ವ್ಯವಸ್ಥೆ ಬೇಡ | ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ತಿರುಗೇಟು - Mahanayaka
1:46 PM Wednesday 11 - December 2024

ನನಗೆ ಮದ್ದುಗುಂಡು ನೀಡಿ, ಪ್ರಯಾಣ ವ್ಯವಸ್ಥೆ ಬೇಡ | ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ತಿರುಗೇಟು

26/02/2022

ಉಕ್ರೇನ್:  ರಷ್ಯಾ ಪಡೆಗಳು ಕೀವ್ ನಗರವನ್ನು ಸುತ್ತುವರಿಯುತ್ತಿದೆ. ಆದರೆ ಉಕ್ರೇನ್, ನಾವು ಸಾಯಲು ಸಿದ್ಧರಿದ್ದೇವೆ, ನಿಮ್ಮ ಮುಂದೆ ಸೋತು ಮಂಡಿಯೂರಲು ಸಿದ್ಧರಿಲ್ಲ ಎನ್ನುವ ಸಂದೇಶವನ್ನು ರವಾನಿಸಿದೆ.

ರಷ್ಯಾವು ಉಕ್ರೇನ್ ನಲ್ಲಿ ಕಿಲೋ ಮೀಟರ್ ಗೆ ಒಂದರಂತೆ ಪ್ರಬಲ ಬಾಂಬ್ ಗಳನ್ನು ಸ್ಫೋಟಿಸುತ್ತಿದ್ದು, ಉಕ್ರೇನ್ ನ ಸ್ಥಿತಿ ತೀವ್ರ ಚಿಂತಾ ಜನಕವಾಗಿದೆ. ಈ ನಡುವೆ ಉಕ್ರೇನ್  ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಸೇನಾ ಸಮವಸ್ತ್ರ ಧರಿಸಿ ತಾವೇ ಖುದ್ಧಾಗಿ ಸೈನಿಕರ ಜೊತೆಗೂಡಿ ಯುದ್ಧಕ್ಕೆ ಧುಮುಕಿದ್ದಾರೆ.

ಈ ನಡುವೆ ಉಕ್ರೇನ್  ಅಧ್ಯಕ್ಷರಿಗೆ ಅಮೆರಿಕವು ಆಫರ್ ವೊಂದನ್ನು ನೀಡಿದ್ದು, ತಾವು ಸುರಕ್ಷಿತವಾಗಿ ಅಮೆರಿಕಕ್ಕೆ ಬರಲು ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದೆ. ಆದರೆ, ಈ ಆಫರ್ ನ್ನು ತಿರಸ್ಕರಿಸಿರುವ  ವೊಲೊಡಿಮಿರ್ ಝೆಲೆನ್ಸ್ಕಿ, ನನಗೆ ಮದ್ದುಗುಂಡುಗಳನ್ನು ನೀಡಿ, ನನ್ನ ಪ್ರಯಾಣಕ್ಕೆ ವ್ಯವಸ್ಥೆ ನಾನು ಕೇಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಸರ್ಕಾರವನ್ನು ಉರುಳಿಸಲು ಮತ್ತು ತಮ್ಮದೇ ಆಡಳಿತದಲ್ಲಿ ಸೇರಿಸಲು ನಿರ್ಧರಿಸಿದ್ದಾರೆ. ಆದರೆ, ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾಕ್ಕೆ ಶರಣಾಗದೇ  ರಷ್ಯಾ ವಿರುದ್ಧ ಸೋಲೊಪ್ಪಿಕೊಳ್ಳಲು ಮುಂದಾಗಿಲ್ಲ.  ಇದೀಗ ಯುರೋಪಿಯನ್ ಯೂನಿಯನ್ ನಾಯಕರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅವರು, ನೀವು ನನ್ನನ್ನು ಜೀವಂತವಾಗಿ ನೋಡುತ್ತಿರುವ ಕೊನೆಯ ಸಮಯವಿದು ಎಂದು ಹೇಳಿದ್ದಾರೆ.  ಜೊತೆಗೆ ಉಕ್ರೇನ್ ಸೈನ್ಯಕ್ಕೆ ಆತ್ಮವಿಶ್ವಾಸ ತುಂಬಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಮಚ್ಚಿನಿಂದ ಹೊಡೆದು ಪತಿಯಿಂದ ಪತ್ನಿಯ ಕೊಲೆ

ದಲಿತ ಯುವಕನ ಕೊಲೆ ಪ್ರಕರಣ: ಆರೋಪಿ ಪೊಲೀಸ್‌ ವಶಕ್ಕೆ

ರಷ್ಯಾದ ಸಾರಿಗೆ ವಿಮಾನ ಹೊಡೆದುರುಳಿಸಿದ ಉಕ್ರೇನ್ : ಅಧಿಕಾರಿಗಳ ಮಾಹಿತಿ

ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ

10ನೇ ಮಹಡಿಯ ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

 

ಇತ್ತೀಚಿನ ಸುದ್ದಿ